ಕರ್ನಾಟಕ

karnataka

ETV Bharat / state

ಕೇಂದ್ರ ಮೀಸಲು ಪಡೆ ಯೋಧ ಸೇರಿದಂತೆ ನಾಲ್ವರಿಗೆ ವಕ್ಕರಿಸಿದ ಕೊರೊನಾ - Bhasavakanyana corona latest news

ಇಂದು ಬಸವಕಲ್ಯಾಣದಲ್ಲಿ ಮತ್ತೆ ನಾಲ್ಕು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಲ್ಲಿ ಕೇಂದ್ರ ಮೀಸಲು ಪಡೆ ಯೋಧನೋರ್ವರಿಗೂ ಮಹಾಮಾರಿ ವಕ್ಕರಿಸಿದೆ.

Bhasavakalyana
Bhasavakalyana

By

Published : Jul 2, 2020, 10:02 PM IST

ಬಸವಕಲ್ಯಾಣ:ಇಂದು ತಾಲೂಕಿನಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 208ಕ್ಕೇರಿದೆ.

ನಗರದ ಬಿರಾದಾರ ಕಾಲನಿಯ 58 ವರ್ಷದ ವ್ಯಕ್ತಿ, ಕಲಖೋರಾದ 34 ವರ್ಷದ ವ್ಯಕ್ತಿ, ಧನ್ನೂರ(ಕೆ) ಗ್ರಾಮದ 56 ವರ್ಷದ ವ್ಯಕ್ತಿ ಹಾಗೂ ಚಿಕನಾಗಾಂವನ 24 ವರ್ಷದ ಮಹಿಳೆಗೆ ಸೋಂಕು ಧೃಡಪಟ್ಟಿದೆ.

ಬಿರಾದಾರ ಕಾಲನಿಯ ವ್ಯಕ್ತಿಗೆ ಕೊರೊನಾ ಸೋಂಕಿತ ವ್ಯಕ್ತಿಯಿಂದ ಮಹಾಮಾರಿ ಬಂದಿದೆ. ಇನ್ನು ಧನ್ನೂರ ವ್ಯಕ್ತಿ ಟೈಪಡ್ ಜ್ವರದ ಹಿನ್ನೆಲೆಯಲ್ಲಿ ಬೀದರ್ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ತಪಾಸಣೆ ನಡೆಸಿದಾಗ ಪಾಸಿಟಿವ್ ಬಂದಿದೆ ಎನ್ನಲಾಗುತ್ತಿದೆ.

ಕೇಂದ್ರ ಮೀಸಲು ಪಡೆಯಲ್ಲಿ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಲಖೋರಾ ಗ್ರಾಮದ ವ್ಯಕ್ತಿ ಕಳೆದ 10 ದಿನಗಳ ಹಿಂದೆ ದೆಹಲಿಯಿಂದ ಮರಳಿ ಬಂದಿದ್ದರು. ಚಿಕನಾಗಾಂವ ಮಹಿಳೆ ಮಹಾರಾಷ್ಟ್ರದ ಮುಂಬೈನಿಂದ ಮರಳಿ ಬಂದಿದ್ದರು ಎಂದು ತಿಳಿದು ಬಂದಿದೆ.

ABOUT THE AUTHOR

...view details