ಬೀದರ್: ಕಳೆದ ಮೂರು ತಿಂಗಳಲ್ಲಿ ಹೆಚ್ಚಿದ ಬೈಕ್ ಕಳ್ಳರ ಜಾಲ ಭೇದಿಸುವಲ್ಲಿ ಔರಾದ್ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಲ್ವರನ್ನು ಬಂಧಿಸಲಾಗಿದ್ದು 17 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.
ಬೀದರ್: ನಾಲ್ವರು ಬೈಕ್ ಕಳ್ಳರ ಬಂಧಿಸಿ, 17 ಬೈಕ್‌ಗಳು ಜಪ್ತಿ - ಬೀದರ್ನಲ್ಲಿ ನಾಲ್ವರು ಬೈಕ್ ಕಳ್ಳರು ಬಂಧನ,
ಬೀದರ್ ಜಿಲ್ಲೆಯಲ್ಲಿ ನಾಲ್ವರು ಬೈಕ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಹೆಚ್ಚಾದ ಬೈಕ್ ಕಳ್ಳರ ಜಾಲ ಭೇದಿಸಿದ ಪೊಲೀಸರು
ಜಿಲ್ಲೆಯ ಕಮಲನಗರ ತಾಲೂಕಿನ ಡೊಣಗಾಂವ್ (ಎಂ) ಗ್ರಾಮದ ಶಿವಾಜಿ ಪಲ್ಲೆವಾಡ, ತೊರಣಾ ಗ್ರಾಮದ ಶಿವ ಶರಣಯ್ಯ ಸ್ವಾಮಿ, ಕೋಟಗ್ಯಾಳ ಗ್ರಾಮದ ಸಚಿನ್ ಕುಲಕರ್ಣಿ ಹಾಗೂ ನರಸಿಂಗ್ ಬಿರಾದರ ಬಂಧಿತರು.
ಇವರು ಕಳ್ಳತನ ಮಾಡಿದ ಬೈಕ್‌ಗಳನ್ನು ಅಗ್ಗದ ಬೆಲೆಯಲ್ಲಿ ವಿವಿಧೆಡೆ ಮಾರಾಟ ಮಾಡುತ್ತಿದ್ದರು. ಜೊತೆಗೆ ಸರಗಳ್ಳತನ ಪ್ರಕರಣಗಳಲ್ಲೂ ಆರೋಪಿಗಳು ಭಾಗಿಯಾಗಿದ್ದರು.