ಕರ್ನಾಟಕ

karnataka

ETV Bharat / state

ವಿಶೇಷಚೇತನರೊಂದಿಗೆ ಸಿಎಂ ಬಿಎಸ್‌ವೈ ಜನ್ಮದಿನ ಆಚರಿಸಿದ ಮಾಜಿ ಶಾಸಕ ಖೂಬಾ - ವಿಶೇಷ ಚೇತನರೊಂದಿಗೆ ಸಿಎಂ ಬಿಎಸ್‌ವೈ ಜನ್ಮ ದಿನಾಚರಣೆ

ಬಿಎಸ್‌ವೈ ಅವರ ಜನ್ಮದಿನದ ನಿಮಿತ್ತ ಮಾಜಿ ಶಾಸಕ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಖೂಬಾ ನಗರದ ಹೊರ ವಲಯದಲ್ಲಿರುವ ತಮ್ಮ ನಿವಾಸದಲ್ಲಿ ಎಸ್‌.ಎಸ್‌.ಖೂಬಾ ಫೌಂಡೇಶನ್‌ನಿಂದ ಸರಳ ಸಮಾರಂಭ ಆಯೋಜಿಸಿ ಸಮಾರಂಭಕ್ಕೆ ವಿಶೇಷಚೇತನರನ್ನು ಆಹ್ವಾನಿಸಿದ್ದರು. ಅಲ್ಲದೇ ಅವರಿಂದಲೇ ಕೇಕ್ ಕಟ್ ಮಾಡಿಸಿ ಸಿಎಂ ಬಿಎಸ್​ವೈಗೆ ಶುಭಾಶಯ ಕೋರಿದರು.

CM BSY's birthday celebrat
ವಿಶೇಷ ಚೇತನರೊಂದಿಗೆ ಸಿಎಂ ಬಿಎಸ್‌ವೈ ಜನ್ಮ ದಿನಾಚರಣೆ ಆಚರಿಸಿದ ಮಾಜಿ ಶಾಸಕ ಖೂಬಾ

By

Published : Feb 27, 2020, 9:43 PM IST

ಬಸವಕಲ್ಯಾಣ​: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದ ನಿಮಿತ್ತ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಹಾಗೂ ಪ್ರಮುಖರು ನಾನಾ ರೀತಿಯ ಅದ್ಧೂರಿ ಸಮಾರಂಭ ಆಯೋಜಿಸಿ ಬಿಎಸ್‌ವೈ ಅವರಿಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಆದರೆ ಮಾಜಿ ಶಾಸಕ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಖೂಬಾ ವಿಶಿಷ್ಟ ಕಾರ್ಯಕ್ರಮವೊಂದನ್ನು ಆಯೋಜಿಸುವ ಮೂಲಕ ಸಿಎಂ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ


ಬಿಎಸ್‌ವೈ ಅವರ ಜನ್ಮದಿನದ ನಿಮಿತ್ತ ನಗರದ ಹೊರ ವಲಯದಲ್ಲಿರುವ ತಮ್ಮ ನಿವಾಸದಲ್ಲಿ ಎಸ್‌.ಎಸ್‌.ಖೂಬಾ ಫೌಂಡೇಶನ್‌ನಿಂದ ಸರಳ ಸಮಾರಂಭ ಆಯೋಜಿಸಿ ಸಮಾರಂಭಕ್ಕೆ ವಿಶೇಷಚೇತನರನ್ನು ಆಹ್ವಾನಿಸಿದ್ದರು. ಅಲ್ಲದೇ ಅವರಿಂದಲೇ ಕೇಕ್ ಕಟ್ ಮಾಡಿಸಿ ಸಿಎಂ ಬಿಎಸ್​ವೈ ಜನ್ಮದಿನ ಆಚರಿಸಿದರು. ವಿಶೇಷಚೇತನರ ಸಮಸ್ಯೆಗಳಿಗೆ ಸ್ಪಂದಿಸುವ ಆಶಯದೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದ ಖೂಬಾ, ವಿಶೇಷಚೇತನರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಪಡೆಯುವಲ್ಲಿ ಅಗುತ್ತಿರುವ ವಿಳಂಬ, ಅಧಿಕಾರಿಗಳ ನಿರ್ಲಕ್ಷ್ಯ ಸೇರಿದಂತೆ ಅವರು ಎದುರಿಸುತ್ತಿರುವ ತೊಡಕುಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದರು. ನಗರ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಿಂದ ಆಗಮಿಸಿದ್ದ ವಿಶೇಷಚೇತನರು, ಸಂವಾದದಲ್ಲಿ ಪಾಲ್ಗೊಂಡು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಸರ್ಕಾರದ ಸೌಲಭ್ಯಗಳಿಗಾಗಿ ಕಚೇರಿಗಳಿಗೆ ಅಲೆದು, ಅಲೆದು ಸಾಕಾಗುತ್ತಿದೆ. ಆದರೂ ಕೆಲಸ ಆಗುತ್ತಿಲ್ಲ. ಕೆಲಸಕ್ಕೆ ರೊಕ್ಕ ಕೇಳ್ತಾರೆ ಎಂದು ಕೆಲವರು ದೂರಿದರು. ಸಮಸ್ಯೆಗಳನ್ನು ಆಲಿಸಿದ ಮಾಜಿ ಶಾಸಕ ಖೂಬಾ, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ನಾನಿದ್ದೇನೆ. ನಿಮಗೆ ನಿಮ್ಮ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಕಲ್ಪಿಸುವಲ್ಲಿ ನಿಮ್ಮೊಂದಿಗಿದ್ದು, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಅಗತ್ಯ ಬಿದ್ದರೆ ನಿಮ್ಮೊಂದಿಗೆ ಸೇರಿ ಹೋರಾಟಕ್ಕೂ ಸಿದ್ಧ ಎಂದು ಧೈರ್ಯ ತುಂಬಿದರು. ಸರ್ಕಾರದ ಎಲ್ಲಾ ಸಹಾಯ, ಸೌಲಭ್ಯಗಳಲ್ಲಿ ವಿಶೇಷ ಚೇತನರಿಗೆ ಶೇ. 5ರಷ್ಟು ಮೀಸಲಾತಿ ಇದೆ. ಆದರೆ ಸರ್ಕಾರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇವರಿಗೆ ಸೌಲಭ್ಯಗಳು ತಲುಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪದವಿ ಮುಗಿಸಿದ ಪ್ರಜ್ಞಾವಂತ ವಿಕಲಚೇತನರಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಬೇಕು. ಇದರಿಂದ ಅಂತಹ ಬಡ ಕುಟುಂಬಗಳಿಗೆ ನೆರವಾಗುತ್ತದೆ. ವಿಶೇಷಚೇತನರಿಗಾಗಿ ನಗರದಲ್ಲಿ ಬರುವ ಮೇ ತಿಂಗಳಲ್ಲಿ ಬೃಹತ್ ಸಮಾವೇಶ ನಡೆಸಲಾಗುವದು. ಈ ಸಮಾವೇಶದಲ್ಲಿ ವಿಶೇಷಚೇತನರಿಗೆ ಸಿಗುವ ಸೌಲಭ್ಯ ಹಾಗೂ ಸರ್ಕಾರದ ಯೋಜನೆಗಳ ಕುರಿತು ಅವರಿಗೆ ಮನವರಿಕೆ ಮಾಡಿ ಕೊಡಲಾಗುವುದು. ವಿಶೇಷಚೇತನರಿಗೆ ಸೌಲಭ್ಯ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ABOUT THE AUTHOR

...view details