ಕರ್ನಾಟಕ

karnataka

ETV Bharat / state

ಬಿಜೆಪಿ ಚುನಾವಣೆ ಪ್ರಚಾರದಲ್ಲಿ ಎಂಇಎಸ್ ಮಾಜಿ ಶಾಸಕ ಅರವಿಂದ ಪಾಟೀಲ್ - Bidar

ಬಸವಕಲ್ಯಾಣ ತಾಲೂಕಿನ ಲಾಡವಂತಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಪರ ಎಂಇಎಸ್ ಮಾಜಿ ಶಾಸಕ ಅರವಿಂದ ಪಾಟೀಲ್ ಕ್ಯಾಂಪೇನ್‌ ಮಾಡಿದರು. ಈ ಮೂಲಕ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮರಾಠಿ ಭಾಷಿಕರ ಓಲೈಕೆಯ ತಂತ್ರ ನಡೆಸಿದರು.

Bidar
ಬಿಜೆಪಿ ಚುನಾವಣೆ ಪ್ರಚಾರದಲ್ಲಿ ಎಂಇಎಸ್ ಮಾಜಿ ಶಾಸಕ ಅರವಿಂದ ಪಾಟೀಲ್

By

Published : Apr 11, 2021, 12:23 PM IST

ಬೀದರ್:ಬಸವಕಲ್ಯಾಣ ಉಪಚುನಾವಣೆಯಲ್ಲಿ ಮರಾಠಿಗರ ಮತಕ್ಕಾಗಿ ಬಿಜೆಪಿ ಪಕ್ಷ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ)ನ ಮಾಜಿ ಶಾಸಕ ಅರವಿಂದ ಪಾಟೀಲ್ ಅವರನ್ನು ಚುನಾವಣೆ ಪ್ರಚಾರ ಕಾರ್ಯಕ್ಕೆ ಬಳಸಿಕೊಂಡಿದೆ.

ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಲಾಡವಂತಿ ಹಾಗೂ ಕೊಹಿನೂರ್ ವ್ಯಾಪ್ತಿಯ ಮರಾಠಿ ಭಾಷಿಕ ಮತದಾರರನ್ನು ಬಿಜೆಪಿಗೆ ಸೆಳೆಯಲು ಮಾಜಿ ಶಾಸಕ ಅರವಿಂದ ಪಾಟೀಲ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ ಎನ್ನಲಾಗಿದೆ.

ಅರವಿಂದ ಪಾಟೀಲ್ ಪರಿಚಯ

ಬೆಳಗಾವಿ ಜಿಲ್ಲೆ ಖಾನಾಪೂರ ವಿಧಾನಸಭೆ ಕ್ಷೇತ್ರದಿಂದ 2013ರಲ್ಲಿ ಎಂಇಎಸ್​ನಿಂದ ಶಾಸಕರಾಗಿ ಆಯ್ಕೆಯಾಗಿರುವ ಅರವಿಂದ ಪಾಟೀಲ್, ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್​ನ ಅಂಜಲಿ ಲಿಂಬಾಳ್ಕರ್ ವಿರುದ್ಧ ಸೋತಿದ್ದರು.

ಜಿಲ್ಲೆಯಲ್ಲಿ ಎಂಇಎಸ್ ಮುಖಂಡರಾಗಿಯೇ ಗುರುತಿಸಿಕೊಂಡಿರುವ ಅರವಿಂದ ಪಾಟೀಲ್ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಬೆಳಗಾವಿ ಬಿಜೆಪಿ ವಲಯದಲ್ಲಿ ಕೇಳಿ ಬಂದ್ರೂ, ಬಹಿರಂಗವಾಗಿ ಯಾವತ್ತು ಅವರು ಹೇಳಿಕೊಂಡಿಲ್ಲ. ಆದ್ರೆ ಉಪ ಚುನಾವಣೆ ಪ್ರಚಾರದಲ್ಲಿ ಡಿಸಿಎಂ ಲಕ್ಷ್ಮಣ​ ಸವದಿ ಅವರೊಂದಿಗೆ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಯಲ್ಲಿ ಪಾಟೀಲ್ ಭರ್ಜರಿ ಓಡಾಟ ನಡೆಸಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಭಾಷಣದುದ್ದಕ್ಕೂ ಮರಾಠಿ ಜಪ

ಚುನಾವಣೆ ಪ್ರಚಾರ ವೇದಿಕೆಯಲ್ಲಿ ಅರವಿಂದ ಪಾಟೀಲ್‌ ಮರಾಠಿ ಭಾಷೆಯಲ್ಲಿಯೇ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರವನ್ನು ಕೊಂಡಾಡಿ ಶರಣು ಸಲಗರ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಇದನ್ನೂ ಓದಿ:ಸಾರಿಗೆ ನೌಕರರ ಮುಷ್ಕರ: ಮೂರ್ನಾಲ್ಕು ದಿನದಲ್ಲಿ ಎಲ್ಲಾ ಸರಿಹೋಗುತ್ತೆ ಎಂದ ಡಿಸಿಎಂ ಲಕ್ಷ್ಮಣ ಸವದಿ

ABOUT THE AUTHOR

...view details