ಬೀದರ್: ಪಡಿತರ ಆಹಾರ ಧಾನ್ಯ ಸಂಗ್ರಹ ಮಾಡಿ ಅಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡ್ತಿದ್ದ ಅಡ್ಡೆಯ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಕಾಳಸಂತೆಯಲ್ಲಿ ಪಡಿತರ ಮಾರಾಟ: ಅಧಿಕಾರಿಗಳ ದಾಳಿ
ಗ್ರಾಮದ ಹೊರ ವಲಯದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ, ಎಣ್ಣೆ ಪಾಕಿಟ್, ಗೋಧಿ ಸಂಗ್ರಹ ಮಾಡಿ ಅಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡ್ತಿದ್ದ ಅಡ್ಡೆಯ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಅಕ್ರಮವಾಗಿ ಪಡಿತರ ಅಕ್ಕಿ, ಎಣ್ಣೆ ಪಾಕಿಟ್, ಗೋಧಿ ಸಂಗ್ರಹ .
ಜಿಲ್ಲೆಯ ಮನ್ನಳ್ಳಿ ಗ್ರಾಮದ ಹೊರ ವಲಯದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ, ಎಣ್ಣೆ , ಗೋಧಿ ಸಂಗ್ರಹ ಮಾಡಿಲಾಗಿತ್ತು. ಸಂಗ್ರಹ ಮಾಡಿದ್ದ ಆಹಾರ ಧಾನ್ಯವನ್ನ ತೆಲಂಗಾಣದಲ್ಲಿ ಅಕ್ರಮವಾಗಿ ಮಾರಾಟ ಮಾಡ್ತಿದ್ದ ಜಾಲವೊಂದನ್ನು ಸ್ಥಳೀಯರು ಆಹಾರ ಇಲಾಖೆಗೆ ವಿಡಿಯೊ ಸಮೇತ ಸಾಕ್ಷಿ ನೀಡಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಖಾಲಿ ಬಿದ್ದ ಪಾಕಿಟ್ಗಳು, ಕುರುಹುಗಳು ಸಂಗ್ರಹಿಸಿ ಗೊದಾಮನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕುರಿತು ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.