ಕರ್ನಾಟಕ

karnataka

ETV Bharat / state

ಬಸವಕಲ್ಯಾಣದಲ್ಲಿ ಮತ್ತೆ ಐದು ಜನರಿಗೆ ಸೋಂಕು: ದ್ವಿಶತಕ ಬಾರಿಸಿದ ಕಿಲ್ಲರ್ ಕೊರೊನಾ - Basavakalyala corona latest news

ಬೀದರ್ ನ ಬಸವಕಲ್ಯಾಣದಲ್ಲಿ ಇಂದು 5 ಜನರಿಗೆ ಕೊರೊನಾ ಸೋಂಕು ತಗುಲಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Basavakalyana
Basavakalyana

By

Published : Jun 28, 2020, 9:28 PM IST

ಬಸವಕಲ್ಯಾಣ:ತಾಲೂಕಿನ ಇಂದು ಐದು ಜನರಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 201ಕ್ಕೇ ಏರಿಕೆಯಾಗಿದೆ.

ನಗರದ ರೇಣಾಗಲ್ಲಿಯ 45 ವರ್ಷದ ವ್ಯಕ್ತಿ ಹಾಗೂ ಧಾರಾಗಿಯರ 64 ವರ್ಷದ ವೃದ್ಧ, ದೇಶಮುಖ ಗಲ್ಲಿಯ 64 ವರ್ಷದ ಮಹಿಳೆ, ತಾಲೂಕಿನ ಮೋರಖಂಡಿ ಗ್ರಾಮದ 39 ವರ್ಷದ ಮಹಿಳೆ ಮತ್ತು ಭೋಸ್ಗಾ ಗ್ರಾಮದ 16 ವರ್ಷದ ಯುವತಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಸೋಂಕಿತರೆಲ್ಲರನ್ನು ಬೀದರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.

ಸೋಂಕಿಗೆ ಬಲಿಯಾದ ನಗರದ ಇಬ್ಬರು ವೃದ್ಧರ ಸಾವಿಗೂ ಮುನ್ನ ಇವರು ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ. ಹೀಗಾಗಿ ಪ್ರಥಮ ಸಂಪರ್ಕಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇಲ್ಲಿಯ ಎರಡು ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರು ಸೇರಿ ಏಳು ಜನ ಸಿಬ್ಬಂದಿಯ ಗಂಟಲು ಮಾದರಿ ಅರೋಗ್ಯ ಇಲಾಖೆ ಸಿಬ್ಬಂದಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details