ಬಸವಕಲ್ಯಾಣ:ಕಬ್ಬಿನ ಗದ್ದೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು ಬೆಂಕಿಗೆ ಆಹುತಿಯಾದ ಘಟನೆ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ನಡೆದಿದೆ.
ಕಬ್ಬಿನ ಗದ್ದೆಗೆ ಬೆಂಕಿ: 2 ಲಕ್ಷಕ್ಕೂ ಅಧಿಕ ಹಾನಿ - ರೈತನ 3 ಎಕರೆ ಪ್ರದೇಶದ ಕಬ್ಬಿನ ಗದ್ದೆಗೆ ಬೆಂಕಿ
ರಾಜೇಶ್ವರ ಗ್ರಾಮದ ದಿಲೀಪರಾವ ಜಾಧವ ಎನ್ನುವ ರೈತನ 3 ಎಕರೆ ಪ್ರದೇಶದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿದ್ದು, ಶೇ.75ರಷ್ಟು ಕಬ್ಬು ಬೆಂಕಿಗೆ ಆಹುತಿಯಾಗಿದೆ.
ರಾಜೇಶ್ವರ ಗ್ರಾಮದ ದಿಲೀಪರಾವ ಜಾಧವ ಎನ್ನುವ ರೈತನ 3 ಎಕರೆ ಪ್ರದೇಶದ ಕಬ್ಬಿನ ಗದ್ದೆಗೆ ಬೆಂಕಿ ತಗುಲಿದ್ದು, ಶೇ.75ರಷ್ಟು ಕಬ್ಬು ಬೆಂಕಿಗೆ ಆಹುತಿಯಾಗಿದೆ. ಬೆಂಕಿಯಿಂದಾಗಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಹಾನಿಯಾಗಿದೆ ಎನ್ನಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯರ ಸಹಾಯದೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದಾಗಿ ಇದ್ದ ಬೆಳೆಗಳನ್ನೆಲ್ಲ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತನ ಜಮೀನಿನಲ್ಲಿ ಕಬ್ಬಿಗೆ ಬೆಂಕಿ ತಗುಲಿದ ಪರಿಣಾಮ ರೈತನ ಸಂಕಷ್ಟ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ಕಬ್ಬು ಕಳೆದುಕೊಂಡ ಸಮಸ್ಯೆಗೆ ಸಿಲಿಕಿರುವ ರೈತನಿಗೆ ಸೂಕ್ತ ಪರಿಹಾರ ಧನ ಕಲ್ಪಿಸಬೇಕು ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷ ಪೋಸ್ತಾರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.