ಬಸವಕಲ್ಯಾಣ:ರಾಶಿ ಮಾಡಲೆಂದು ಹೊಲದಲ್ಲಿ ಕೂಡಿಟಿದ್ದ ಸೋಯಾಬಿನ್ ಬಣವಿಗಳಿಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಸೋಯಾ ಬೆಳೆ ಬೆಂಕಿಗೆ ಆಹುತಿಯಾದ ಘಟನೆ ತಾಲೂಕಿನ ಘಾಟ್ ಹಿಪ್ಪರ್ಗಾ ಗ್ರಾಮದಲ್ಲಿ ನಡೆದಿದೆ.
ಸೋಯಾ ಬಣವಿಗೆ ಬೆಂಕಿ: ಲಕ್ಷಾಂತರ ರೂ ನಷ್ಟ - ಸೋಯಾಬಿನ್ ಬಣವಿಗಳಿಗೆ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ
ಸೋಯಾಬಿನ್ ಬಣವಿಗಳಿಗೆ ಬೆಂಕಿ ತಗುಲಿ ಸುಮಾರು 50 ಕ್ವಿಂಟಾಲ್‌ನಷ್ಟು ಸೋಯಾಬಿನ್ ಬೆಂಕಿಗೆ ಸುಟ್ಟು ಭಸ್ಮವಾಗಿದೆ.
ಸೋಯಾ ಬಣವಿಗೆ ಬೆಂಕಿ: ಲಕ್ಷಾಂತರ ರೂ ನಷ್ಟ
ಗ್ರಾಮದ ರೈತ ರಾಜಕುಮಾರ ಬೆಳಮಗೆ ಎನ್ನುವರ ಜಮೀನಿನಲ್ಲಿ ಇದ್ದ ಎರಡು ಸೋಯಾಬಿನ್ ಬಣವಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಸುಮಾರು 50 ಕ್ವಿಂಟಾಲ್‌ನಷ್ಟು ಸೋಯಾಬಿನ್ ಬೆಂಕಿಗೆ ಸುಟ್ಟು ಭಸ್ಮವಾಗಿದೆ. ಬಣವಿಗಳಿಗೆ ಬೆಂಕಿ ಬಿದ್ದ ಸುದ್ದಿ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಬಣವಿಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದವು ಎಂದುಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.