ಕರ್ನಾಟಕ

karnataka

ETV Bharat / state

ಧಗಧಗನೆ ಹೊತ್ತಿ ಉರಿದ ಖಾಸಗಿ ಬಸ್: 17 ಜನ ಪ್ರಾಣಾಪಾಯದಿಂದ ಪಾರು...! - fire catches on private bus

ಹುಮನಾಬಾದ್ ಸಮಿಪದ ಬೀದರ್-ಕಲಬುರಗಿ ಹೆದ್ದಾರಿಯ ಧುಮ್ಮನಸೂರು ಗ್ರಾಮದ ಬಳಿ, ಚಲಿಸುತ್ತಿದ್ದ ಖಾಸಗಿ ಬಸ್ ಧಗ ಧಗನೆ ಹೊತ್ತಿ ಉರಿದಿದೆ.

fire catches on private bus in Bidar
ಧಗಧಗನೆ ಹೊತ್ತಿ ಉರಿದ ಖಾಸಗಿ ಬಸ್

By

Published : Sep 2, 2020, 9:32 PM IST

ಬೀದರ್: ಚಲಿಸುತ್ತಿದ್ದ ಖಾಸಗಿ ಬಸ್ ಇಂಜಿನ್​​ನಲ್ಲಿ ಉಂಟಾದ ಅಗ್ನಿ ಅವಘಢದಿಂದಾಗಿ, ನೋಡು ನೋಡುತ್ತಲೆ ಬಸ್​​ನ ತುಂಬೆಲ್ಲಾ ಬೆಂಕಿ ಆವರಿಸಿಕೊಂಡು ಧಗ ಧಗನೆ ಹೊತ್ತಿ ಉರಿದಿದೆ.

ಜಿಲ್ಲೆಯ ಹುಮನಾಬಾದ್ ಸಮಿಪದ ಬೀದರ್-ಕಲಬುರಗಿ ಹೆದ್ದಾರಿಯ ಧುಮ್ಮನಸೂರು ಗ್ರಾಮದ ಬಳಿ ಘಟನೆ ನಡೆದಿದ್ದು, ಸಂಚಾರ ಮಾಡ್ತಿದ್ದ 17 ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಧಗಧಗನೆ ಹೊತ್ತಿ ಉರಿದ ಖಾಸಗಿ ಬಸ್

ಬಸ್ ಚಲಿಸುವಾಗ ಒಮ್ಮಲೆ ಬ್ರೇಕರ್ ಬಳಿ ಜಂಪ್​​ ಆಗಿದ್ದು, ಹೀಗಾಗಿ ಬಸ್ ಇಂಜನ್​​ನಲ್ಲಿ ಅಗ್ನಿ ಕಾಣಿಸಿಕೊಂಡಿದೆ. ಈ ವೇಳೆಯಲ್ಲಿ ಚಾಲಕ, ಬಸ್​ನ್ನು ಸೈಡಿಗೆ ಹಾಕಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾರೆ. ಹೀಗಾಗಿ ಯಾವುದೇ ಪ್ರಾಣಾಪಾಯವಾಗಿಲ್ಲ. ಭಾರಿ ದುರಂತವೊಂದು ತಪ್ಪಿದ್ದು, ಎಂದು ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ವಿಷಯ ತಿಳಿದ ಹುಮನಾಬಾದ್ ಸಿಪಿಐ ಮಲ್ಲಿಕಾರ್ಜುನ ಯಾತನೂರ್ ಹಾಗೂ ಎರಡು ಅಗ್ನಿ ಶಾಮಕ ದಳದ ತಂಡ, ಬೆಂಕಿ ನಂದಿಸಲು ಹರ ಸಾಹಸ ಪಟ್ಟಿದ್ದು, ಆದ್ರೆ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಬಸ್ ಭಾಲ್ಕಿಯಿಂದ, ಹುಮನಾಬಾದ್, ಕಲಬುರಗಿ, ಚಿತ್ರದುರ್ಗ, ಮೂಲಕ ಬೆಂಗಳೂರಿನತ್ತ ಪ್ರಯಾಣಿಕರನ್ನು ಹೊತ್ತು ಹೊರಟಿತ್ತು ಎನ್ನಲಾಗಿದೆ.

ABOUT THE AUTHOR

...view details