ಕರ್ನಾಟಕ

karnataka

ETV Bharat / state

ಹುಮನಾಬಾದ್​ ಪಟ್ಟಣದಲ್ಲಿ ಅಗ್ನಿ ಅವಘಡ: 5 ಅಂಗಡಿಗಳು ಭಸ್ಮ - Bidar Fire accident news

ಹುಮನಾಬಾದ್ ಪಟ್ಟಣದ ಮಾರುಕಟ್ಟೆಯ ಪಕ್ಕದಲ್ಲಿ ತ್ಯಾಜ್ಯದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಪಕ್ಕದಲ್ಲಿದ್ದ ಅಂಗಡಿಗಳಿಗ ಬೆಂಕಿ ತಾಗಿ 5 ಅಂಗಡಿಗಳು ಸುಟ್ಟು ಭಸ್ಮವಾಗಿವೆ.

Fire accident
ಅಗ್ನಿ ಅವಘಡ

By

Published : Nov 4, 2020, 4:09 PM IST

ಬೀದರ್:ಅಗ್ನಿ ಅವಘಢ ಸಂಭವಿಸಿ ಐದು ಅಂಗಡಿಗಳು ನೋಡ ನೋಡುತ್ತಲೇ ಬೆಂಕಿಗಾಹುತಿಯಾದ ಘಟನೆ ಜಿಲ್ಲೆಯ ಹುಮನಾಬಾದ್​ನಲ್ಲಿ ನಡೆದಿದೆ.

ಹುಮನಾಬಾದ್ ಪಟ್ಟಣದ ಮಾರುಕಟ್ಟೆಯ ಪಕ್ಕದಲ್ಲಿ ತ್ಯಾಜ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಲೇ ಬೆಂಕಿ ಪಕ್ಕದ ಟಿವಿ ರಿಪೇರಿ ಅಂಗಡಿಗೆ ತಗುಲಿದ್ದು, ಸಮಿಪದಲ್ಲೇ ಇದ್ದ ಐದು ಅಂಗಡಿಗಳಿಗೆ ಬೆಂಕಿ ಆವರಿಸಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.

ಅಗ್ನಿ ಅವಘಡ

ಒಮ್ಮಲೇ ಕಾಣಿಸಿಕೊಂಡ ಬೆಂಕಿ ನಂದಿಸಲು ಹುಮನಾಬಾದ್ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟರೂ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮವಾಗಿವೆ. ಈ ಕುರಿತು ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details