ಬೀದರ್: ನಗರದ ಎಟಿಎಂ ವೊಂದರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ನೋಡು ನೋಡುತ್ತಲೇ ಕೊಠಡಿಯಲ್ಲಿ ಬೆಂಕಿ ಆವರಿಸಿಕೊಂಡು ಎಟಿಎಂ ಹೊತ್ತಿ ಉರಿದಿದೆ.ನೌಬಾದ್ ಗ್ರಾಮದ ಭಾಲ್ಕಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ನಲ್ಲಿ ಈ ಅಗ್ನಿ ದುರಂತ ನಡೆದಿದ್ದು, ಮೊದ ಮೊದಲು ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಕ್ರಮೇಣ ಇಡೀ ಎಟಿಎಂ ಕೇಂದ್ರವನ್ನೇ ನುಂಗಿಹಾಕಿದೆ.
ಎಟಿಎಂನಲ್ಲಿ ಭಾರಿ ಅಗ್ನಿ ಅವಘಡ: ಅಲ್ಲಿದ್ದ ಹಣದ ಸ್ಥಿತಿ ಏನಾಯ್ತು ಗೊತ್ತಾ?
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮ ನಗರದ ಕೆನರಾ ಬ್ಯಾಂಕ್ ಎಟಿಎಂ ಸುಟ್ಟು ಕರಕಲಾಗಿದೆ. ಮೊದಲು ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಕ್ರಮೇಣ ಇಡೀ ಎಟಿಎಂ ಕೇಂದ್ರವನ್ನೇ ನುಂಗಿಹಾಕಿದೆ.
ಎಟಿಎಂನಲ್ಲಿ ಸಂಭವಿಸಿದ ಅಗ್ನಿ ಅವಘಡ
ಉರಿಯುತ್ತಿರುವ ಬೆಂಕಿಯನ್ನು ಕಂಡ ಸ್ಥಳೀಯರು ತಕ್ಷಣ ಅಗ್ನಿ ಶಾಮಕದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವಷ್ಟರಲ್ಲಿ ಎಟಿಎಂ ಸುಟ್ಟು ಕರಕಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಈ ಅವಘಡ ನಡೆದಿದೆ ಎನ್ನಲಾಗಿದ್ದು ಎಟಿಎಂನಲ್ಲಿದ್ದ ನಗದು ಹಣದ ಸ್ಥಿತಿ ಏನಾಗಿದೆ? ಎಷ್ಟು ಹಣ ಇತ್ತು ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.