ಕರ್ನಾಟಕ

karnataka

ETV Bharat / state

ಟ್ರಾಫಿಕ್ ನಿಯಮ ಉಲ್ಲಂಘನೆ: ಎರಡು ದಿನದಲ್ಲಿ 13 ಲಕ್ಷ ರೂ. ದಂಡ ವಸೂಲಿ...! - 13 ಲಕ್ಷ ರೂ. ದಂಡ ವಸೂಲಿ

ಹೊಸ ಮೊಟಾರ್ ವಾಹನ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಬೀದರ್ ಜಿಲ್ಲೆಯಾದ್ಯಂತ ಪೊಲೀಸರು ಅಲರ್ಟ್ ಆಗಿದ್ದು, 24 ಗಂಟೆಯಲ್ಲಿ 13 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಹೊಸ ಮೊಟಾರ್ ವಾಹನ ತಿದ್ದುಪಡಿ ಕಾಯ್ದೆ

By

Published : Sep 10, 2019, 10:20 PM IST

ಬೀದರ್:ಹೊಸ ಮೊಟಾರ್ ವಾಹನ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಜಿಲ್ಲೆಯಾದ್ಯಂತ ಪೊಲೀಸರು ಅಲರ್ಟ್ ಆಗಿದ್ದು, 24 ಗಂಟೆಯಲ್ಲಿ 13 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಹೊಸ ಮೊಟಾರ್ ವಾಹನ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಬೀದರ್ ಜಿಲ್ಲೆಯಾದ್ಯಂತ ಪೊಲೀಸರು ಅಲರ್ಟ್ ಆಗಿದ್ದಾರೆ

ಸೀಟ್ ಬೆಲ್ಟ್ ಧರಿಸದೆ, ಹೆಲ್ಮೆಟ್ ಇಲ್ಲದೆ, ಲೈಸನ್ಸ್, ಇನ್ಸೂರೇನ್ಸ್ ಇಲ್ಲದಕ್ಕೆ ದಿನಾಂಕ 9 ರಂದು ಒಂದೇ ದಿನದಲ್ಲಿ ಮಧ್ಯಾಹ್ನ 1.30 ರಿಂದ 4.30 ರ ವರೆಗೆ ನಡೆದ ಕಾರ್ಯಾಚರಣೆಯಲ್ಲಿ 1012 ಪ್ರಕರಣ ದಾಖಲಾಗಿದ್ದು, ಈ ಪೈಕಿ 9,72,700 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಕಳೆದ ಎರಡು ದಿನಗಳಲ್ಲಿ ಜಿಲ್ಲೆಯಾದ್ಯಂತ ನಡೆದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 1423 ಪ್ರಕರಣ ದಾಖಲಾಗಿದ್ದು, ಈ ಪೈಕಿ 13,07,900 ರೂಪಾಯಿ ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ ಅವರು ತಿಳಿಸಿದ್ದಾರೆ.

ABOUT THE AUTHOR

...view details