ಬೀದರ್: ಹಣದ ವ್ಯವಹಾರ ಸಂಬಂಧ ಯುವಕನೊಬ್ಬ ಮಹಿಳೆಗೆ ಹರಿತವಾದ ಆಯುಧದಿಂದ ಇರಿದು ಗಂಭೀರ ಗಾಯಗೊಳಿಸಿರುವ ಘಟನೆ ನಗರದಲ್ಲಿ ನಡೆದಿದೆ. ಅಮಿಶಾ ತುಕಾರಾಮ(32) ಎಂಬ ಮಹಿಳೆ ಮೇಲೆ ದಾಳಿ ಮಾಡಿದ ಪವನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಣದ ವಿಷಯಕ್ಕೆ ಜಗಳ: ಮಹಿಳೆಗೆ ಆಯುಧದಿಂದ ಇರಿದ ಯುವಕ - ಗಾಂಧಿಗಂಜ್ ಪೊಲೀಸ್ ಠಾಣೆ
ಮಹಿಳೆ ಜೊತೆ ಯುವಕ ಜಗಳಕ್ಕೆ ಇಳಿದಿದ್ದು, ಜಗಳ ವಿಕೋಪಕ್ಕೆ ತಿರುಗಿ ಪಾರ್ಲರ್ನಲ್ಲಿದ್ದ ಹರಿತವಾದ ಆಯುಧದಿಂದ ಮಹಿಳೆಗೆ ಇರಿದಿದ್ದಾನೆ.
ಹಣದ ವಿಷಯಕ್ಕೆ ಜಗಳ: ಮಹಿಳೆಗೆ ಆಯುಧದಿಂದ ಇರಿದ ಯುವಕ
ನ್ಯೂ ಆದರ್ಶ ಕಾಲನಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಅಮಿಶಾ ಜತೆ ಸಮೀಪದಲ್ಲಿ ಅಂಗಡಿ ಹೊಂದಿರುವ ಪವನ್ ಎಂಬಾತ ಹಣದ ವ್ಯವಹಾರ ಸಂಬಂಧ ಜಗಳ ಆಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಪಾರ್ಲರ್ನಲ್ಲಿದ್ದ ಹರಿತವಾದ ಆಯುಧದಿಂದ ಹೊಟ್ಟೆ ಮತ್ತು ಕುತ್ತಿಗೆಗೆ ಐದಾರು ಬಾರಿ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಅಮೀಶಾಳನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಲೂಧಿಯಾನದ ಕಾರಾಗೃಹದಲ್ಲಿ ಕೈದಿಗಳ ಹೊಡೆದಾಟ: ಮೂವರಿಗೆ ಗಾಯ