ಬೀದರ್:ಕೊರೊನಾ ವೈರಸ್ ಸೋಂಕು ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ಮುಂದಾದ ಸರ್ಕಲ್ ಇನ್ಸ್ಪೆಕ್ಟರ್ ಮೇಲೆ ಹೋಂ ಕ್ವಾರಂಟೈನ್ನಲ್ಲಿರಬೇಕಾದ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಜಿಲ್ಲೆಯ ಕಮಲನಗರ ತಾಲೂಕಿನ ಬೆಳಕೊಣಿ(ಭೋ) ಗ್ರಾಮದಲ್ಲಿ ಕಮಲನಗರ ಪೊಲೀಸ್ ಠಾಣೆ ಸಿಪಿಐ ಪಾಲಾಕ್ಷಯ್ಯ ಹಿರೇಮಠ ಅವರ ಮೇಲೆ ರಾಹುಲ್ ಹಾಗೂ ದೌಲತರಾವ್ ಎಂಬಾತರು ಹಲ್ಲೆ ಮಾಡಿದ್ದಾರೆ. ಬಳಿಕ ಗಾಯಗೊಂಡ ಸಿಪಿಐ ಅವರನ್ನು ಕಮಲನಗರ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಕೊರೊನಾ ಜಾಗೃತಿ ವೇಳೆ ಕಮಲನಗರ ಸಿಪಿಐ ಪಾಲಾಕ್ಷಯ್ಯ ಮೇಲೆ ತಂದೆ-ಮಗನಿಂದ ಹಲ್ಲೆ...! ಬೆಳಕೊಣಿ ಗ್ರಾಮದಲ್ಲಿ ಮಹಾರಾಷ್ಟ್ರದ ಪುಣೆ ನಗರದಿಂದ ಬಂದ ರಾಹುಲ್ ಎಂಬಾತನನ್ನು ಹೋಂ ಕ್ವಾರಂಟೈನ್ನಲ್ಲಿಡಲಾಗಿತ್ತು. ಆದ್ರೆ ಈ ರಾಹುಲ್ ಎಂಬ ವ್ಯಕ್ತಿ ಊರೆಲ್ಲಾ ಸುತ್ತಾಡುತ್ತ ಸೋಂಕು ಹರಡಿಸುವ ಭಯ ಹುಟ್ಟಿಸಿದ್ದ. ಈ ವೇಳೆಯಲ್ಲಿ ಸ್ಥಳೀಯ ಆಶಾ ಕಾರ್ಯಕರ್ತೆ ಮನೆಯಲ್ಲೇ ಇರುವಂತೆ ಸಲಹೆ-ಸೂಚನೆ ನೀಡಿದ್ದು, ಆಶಾಕಾರ್ಯಕರ್ತೆಯನ್ನು ನಿಂದಿಸಿದ್ದಾರೆ.
ನಂತರ ಗ್ರಾಮಕ್ಕೆ ಕೊರೊನಾ ಜಾಗೃತಿಗಾಗಿ ಬಂದ ಸಿಪಿಐ ಪಾಲಾಕ್ಷಯ್ಯ ಹಿರೇಮಠ ಅವರು ರಾಹುಲ್ ಅವರನ್ನು ಸಮಜಾಯಿಸಲು ಮುಂದಾದಾಗ ರಾಹುಲ್ ಅವರ ತಂದೆ ದೌಲತರಾವ್ ಸಿಪಿಐ ಆವರನ್ನು ಹಿಡಿದಿದ್ದಾನೆ. ಈ ವೇಳೆ, ರಾಹುಲ್ ಮನೆಯಲ್ಲಿದ್ದ ಕಬ್ಬಿಣದ ಕೊಡದಿಂದ ಸಿಪಿಐ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಈ ಕುರಿತು ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.