ಕರ್ನಾಟಕ

karnataka

ETV Bharat / state

ಉಚಿತ ನೀರಿನ ಪೂರೈಕೆ ಹೆಸರಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದೀರಿ: ರೈತನ ಆರೋಪಕ್ಕೆ ಸಚಿವ ತಬ್ಬಿಬ್ಬು - undefined

ನಮ್ಮ ನೀರು ತೆಗೆದುಕೊಂಡು ಸರ್ಕಾರದಿಂದ ದುಡ್ಡ ಕಿತ್ತುಕೊಂಡು ಟ್ಯಾಂಕರ್ ಮೇಲೆ ಫೋಟೊ ಹಾಕಿ ಉಚಿತ ಎಂದು ಸಚಿವರು ಸಾರುತ್ತಿದ್ದಾರೆ ಎಂದು ಸಚಿವ ರಹೀಂ​ ಖಾನ್ ವಿರುದ್ಧ ರೈತನೋರ್ವ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.

ಸಚಿವರ ಮೇಲೆ ರೈತ ಆರೋಪ

By

Published : Jun 19, 2019, 5:08 PM IST

ಬೀದರ್: ಉಚಿತ ನೀರು ಕೋಡ್ತಿನಿ ಅಂತ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಿರಾ ಎಂದು ತುಂಬಿದ ಸಭೆಯಲ್ಲೇ ರೈತನೋರ್ವ ಮಾಡಿದ ಆರೋಪಕ್ಕೆ ಸಚಿವ ರಹೀಂ ಖಾನ್ ಕಕ್ಕಾಬಿಕ್ಕಿಯಾದರು.

ಸಚಿವರ ವಿರುದ್ಧ ರೈತನಿಂದ ಆರೋಪ

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರೈತನೋರ್ವ ಸಂಸದ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್​ ಸಮ್ಮುಖದಲ್ಲೇ ಸಚಿವ ರಹೀಂ ಖಾನ್ ಮುಖದಲ್ಲಿ ನೀರಿಳಿಯುವಂತೆ ಮಾಡಿದರು. ಜನರಿಗೆ ಉಚಿತವಾಗಿ ಟ್ಯಾಂಕರ್​ ಮೂಲಕ ಕುಡಿಯುವ ನೀರು ಕೊಡಿಸುತ್ತಿದ್ದೇನೆಂದು ಫೋಟೊಗಳನ್ನು ಟ್ಯಾಂಕರ್​ಗಳ ಮೇಲೆ ಅಂಟಿಸಿಕೊಂಡು ಪ್ರಚಾರ ಪಡೆದುಕೊಂಡಿದ್ದೀರಿ. ಕಾರಂಜಾ ಜಲಾಶಯದ ನೀರು ತೆಗೆದುಕೊಳ್ಳುತ್ತೀರಿ. ನಮಗೆ ಪರಿಹಾರ ಕೊಡಲಿಕ್ಕೆ ಆಗೋದಿಲ್ಲವಾ ಎಂದು ರೈತ ಕಿಡಿಕಾರಿದ್ದಾರೆ.

'ರೀ ಸಚಿವರೇ ಸರ್ಕಾರದಿಂದ ಟ್ಯಾಂಕರ್​ ನೀರು ಸರಬರಾಜು ಹೆಸರಿನಲ್ಲಿ ಹಣ ಪಡೆದು. ಉಚಿತ ನೀರು ಕುಡಿಸುತ್ತಿದ್ದೇನೆಂದು ಪ್ರಚಾರ ಪಡೆಯುತ್ತಿರುವುದು ಯಾವ ನ್ಯಾಯಾ ರೀ. ನಗರಸಭೆಯಿಂದ ಕೋಟಿ ಕೋಟಿ ರೂಪಾಯಿ ಹಣ ಪಡೆದು ಉಚಿತವಾಗಿ ನೀರು ಕೊಡಿಸುತ್ತಿದ್ದೇನೆಂದು ಹೇಳುವುದು ಎಷ್ಟು ಸರಿ ಸಚಿವರೇ'..? ಎಂದು ರೈತ ಸಖತ್ ಕ್ಲಾಸ್ ತೆಗೆದುಕೊಂಡಿದ್ದರು.

ಇದೇ ತಿಂಗಳಾಂತ್ಯದಲ್ಲಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಾಲ್ಕು ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ಕಾರಂಜಾ ಸಂತ್ರಸ್ತರ ಮನವೊಲಿಸಲು ನಡೆದ ಸಭೆಯಲ್ಲಿ ರೈತ ಈ ಗಂಭೀರ ಆರೋಪ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details