ಬಸವಕಲ್ಯಾಣ:ಸಾಲ ಬಾಧೆಯಿಂದ ನೊಂದ ರೈತ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ತಾಲೂಕಿನ ಬಂಡಗರವಾಡಿಯಲ್ಲಿ ನಡೆದಿದೆ.
ಸಾಲ ಬಾಧೆ: ಬಾವಿಗೆ ಹಾರಿ ರೈತ ಆತ್ಮಹತ್ಯೆ - ಸಾಲ ಬಾಧೆಯಿಂದ ಬಾವಿಗೆ ಹಾರಿ
ಬಸವಕಲ್ಯಾಣದ ಗ್ರಾಮವೊಂದರಲ್ಲಿ ಸಾಲ ಬಾಧೆ ತಾಳಲಾರದೆ ರೈತ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರೈತ ಆತ್ಮಹತ್ಯೆ
ಗ್ರಾಮದ ನಾರಾಯಣ ಶಾಮರಾವ ಗಡದ್(60) ಆತ್ಮಹತ್ಯೆ ಮಾಡಿಕೊಂಡ ರೈತ. ತನ್ನ ಜಮೀನಿನ ಪಕ್ಕದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ 8ರಂದು ಮನೆಯಿಂದ ಹೊದ ಈತ ಮರಳಿ ಮನೆಗೆ ಬಂದಿಲ್ಲ. ಹೀಗಾಗಿ ಮನೆಯವರು ಹುಡುಕಾಟ ನಡೆಸಿದ್ದಾಗ ಶುಕ್ರವಾರ ಬೆಳಗ್ಗೆ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೃತ ರೈತನಿಗೆ ಘೋಟಾಳ ಗ್ರಾಮದ ಪಿ.ಕೆ.ಪಿ.ಎಸ್ನಲ್ಲಿ 50 ಸಾವಿರ ರೂ. ಸಾಲವಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.