ಬಸವಕಲ್ಯಾಣ:ಸಾಲಬಾಧೆಯಿಂದ ನೊಂದ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ತಾಲೂಕಿನ ಲಾಡವಂತಿ ಗ್ರಾಮದಲ್ಲಿ ನಡೆದಿದೆ.
ಸಾಲಬಾಧೆ ತಾಳಲಾರದೆ ಬಸವ ಕಲ್ಯಾಣದಲ್ಲಿ ರೈತ ನೇಣಿಗೆ ಶರಣು - basavakalyana farmer suicide news
ಸಾಲಬಾಧೆಯಿಂದ ನೊಂದ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಸವಕಲ್ಯಾಣ ತಾಲೂಕಿನ ಲಾಡವಂತಿ ಗ್ರಾಮದಲ್ಲಿ ನಡೆದಿದೆ.
ಲಕ್ಷಾಂತರ ರೂಪಾಯಿ ಸಾಲದ ಭಾರ ತಾಳದೆ ರೈತ ಆತ್ಮಹತ್ಯೆಗೆ ಶರಣು
ಗ್ರಾಮದ ವಿಶ್ವಂಬರ ಢೋಲೆ(55) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಸಾಲದಿಂದ ಬೇಸತ್ತ ರೈತ ಗುರುವಾರ ಸಂಜೆ ತನ್ನ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ. ಮೃತ ರೈತನಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಸೇರಿ ಖಾಸಗಿ ವಲಯದಲ್ಲಿ ಲಕ್ಷಾಂತರ ರೂ. ಸಾಲವಿದೆ ಎನ್ನಲಾಗ್ತಿದೆ.
ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಮಹೇಶಗೌಡ ಪಾಟೀಲ ಹಾಗೂ ಪಿಎಸ್ಐ ಬಸವಲಿಂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.