ಕರ್ನಾಟಕ

karnataka

ETV Bharat / state

ಸಂಸದ  ಖೂಬಾಗೆ ಶಿಷ್ಟಾಚಾರ ಗೊತ್ತಾ?:  ರಾಜಕೀಯ ಕೆಸರೆರಚಾಟಕ್ಕೆ ಖಂಡ್ರೆ ಖಂಡನೆ - ರಾಜಕೀಯ ಕೆಸರೆರಚಾಟಕ್ಕೆ ಖಂಡ್ರೆ ಖಂಡನೆ

ಸಂಸದ ಭಗವಂತ ಖೂಬಾ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನಡುವಿನ ರಾಜಕೀಯ ಕೆಸರೆರಚಾಟ ಮುಂದುವರೆದಿದೆ. ಬೀದರ್​ನಲ್ಲಿ ಇಂದು ಖೂಬಾ ವಿರುದ್ಧ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷರು, ನಮ್ಮ-ನಿಮ್ಮ ರಾಜಕೀಯದ ನಡುವೆ ಕ್ಷೇತ್ರದ ಜನರು ಬಲಿಯಾಗಬಾರದು ಎಂದಿದ್ದಾರೆ.

Eshwar Khandre reaction about MP Bhagwant Khuba
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

By

Published : May 18, 2020, 5:15 PM IST

ಬೀದರ್: ಸಂಸದ ಭಗವಂತ ಖೂಬಾ ಅವರಿಗೆ ನಾನು ಭಗವಂತ ಖೂಬಾ ಅಂತಲೆ ಕರೆಯುವೆ, ಅವರು ನನಗೆ ಬೇಕಾದ್ದು ಕರೆಯಲಿ. ಅವರಿಗೆ ಶಿಷ್ಟಾಚಾರ ಗೊತ್ತಿದೆಯಾ? ಅವರು ದೊಡ್ಡವರು ಅಂದ ತಕ್ಷಣ ಏನು​ ಬೇಕಾದರೂ ಅನ್ನಬಹುದಾ? ಸರ್ಕಾರ ಅವರದ್ದೇ ಇದೆ ಅಂತ ಎಲ್ಲವೂ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬೇಸರ ವ್ಯಕ್ತಪಡಿಸಿದರು.

ನಗರದ ಅಕ್ಕಮಹಾದೇವಿ ಕಾಲೇಜಿನಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಮೇಲೆ ಸೇಡಿನ ರಾಜಕೀಯ ಮಾಡುವುದಿದ್ದರೆ ಏನು ಬೇಕಾದರೂ ಮಾಡಲಿ. ಬಡವರ ವಸತಿ ಯೋಜನೆಯ ಅನುದಾನ ನಿಲ್ಲಿಸಿ ಅದರಲ್ಲಿ ಲೋಪವಾಗಿದೆ ಎಂದು ಹೇಳಿ ಸುದ್ದಿಗೊಷ್ಠಿಯಲ್ಲಿ ನನ್ನನ್ನು ವೈಯಕ್ತಿಕವಾಗಿ ನಿಂದಿಸಿದ್ದಾರೆ. ನಾನು ಈಶ್ವರ್​ ಬಾಬಾ ಅಲ್ಲ, ಈಶ್ವರ ಖಂಡ್ರೆ ಆಗಿಯೇ ಇರುವೆ.

ವಸತಿ ಯೋಜನೆಯಡಿ ರಾಜ್ಯದ 224 ವಿಧಾನಸಭೆ ಕ್ಷೇತ್ರಗಳನ್ನು ಬಿಟ್ಟು ಭಾಲ್ಕಿ ವಿಧಾನಸಭೆಯನ್ನೇ ಟಾರ್ಗೆಟ್ ಮಾಡಿ ನನ್ನ ಕ್ಷೇತ್ರದ ವಿವಿಧ ಯೋಜನೆಡಿ ಮನೆ ಕಟ್ಟಿಕೊಂಡ 5000 ಕ್ಕೂ ಅಧಿಕ ಬಡವರಿಗೆ ಕಳೆದ 10 ತಿಂಗಳಿಂದ ಅನುದಾನ ನೀಡದೇ ಅನ್ಯಾಯ ಮಾಡಿದ್ದಾರೆ. ಯೋಜನೆಡಿ ಲೋಪವಾದರೆ ಕಠಿಣವಾದ ಕ್ರಮ ಕೈಗೊಳ್ಳಲಿ, ಆದ್ರೆ ಸಾಲ ಮಾಡಿಕೊಂಡು ಮನೆ ಕಟ್ಟಿದ ಜನರನ್ನು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಂದಿದ್ದಾರೆ. ನಿಯಮಾನುಸಾರ 15 ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಬೇಕು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

ಕಳೆದ 10 ತಿಂಗಳಿನಿಂದ ನಯಾ ಪೈಸಾ ಜಮಾ ಆಗಿಲ್ಲ. ಸಂಸದ ಭಗವಂತ ಖೂಬಾ ಅವರು ನನ್ನ ಮೇಲಿನ ಸೇಡಿನ ರಾಜಕೀಯಕ್ಕೆ ಭಾಲ್ಕಿ ಕ್ಷೇತ್ರದ ಜನರ ಅನುದಾನ ನಿಲ್ಲಿಸಿದ್ದಾರೆ. ಮತ್ತೊಂದೆಡೆ, ವಸತಿ ಸಚಿವರಿಗೆ ಭೇಟಿಯಾಗಿ ಮನೆ ಬಿಲ್ ಮಾಡಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಮಾಡುತ್ತಾರೆ. ಇವರ ಈ ಎರಡು ಮುಖದ ಆಟ ಬಯಲಾಗಿದೆ ಎಂದು ಖಂಡ್ರೆ ಹೇಳಿದರು.

ಕಳೆದ ಮೈತ್ರಿ ಸರ್ಕಾರದ ಅವಧಿಯಲ್ಲಿ ಭಾಲ್ಕಿ ಕ್ಷೇತ್ರದ ಜನರಿಗೆ ಗುಡಿಸಲು ಮುಕ್ತ ತಾಲೂಕು ಮಾಡಲು ಹಂತ ಹಂತವಾಗಿ ಹೆಚ್ಚುವರಿಯಾಗಿ ತಂದ 5,000 ಮನೆಗಳು ಇಂದು ಪೂರ್ಣವಾದರೂ ಬಡವರಿಗೆ ಹಣ ಸಿಕ್ಕಿಲ್ಲ. ಇದನ್ನು ಮುಚ್ಚಿಡಲು ಸೇಡಿನ ರಾಜಕೀಯ ಮಾಡುತ್ತ ಹೊರಟ ಸಂಸದರ ವರ್ತನೆಗೆ ವಸತಿ ಸಚಿವ ವಿ.ಸೊಮಣ್ಣ ಉತ್ತರಿಸಬೇಕಾಗುತ್ತದೆ. ಕೋವಿಡ್ ಮುಗಿದ ತಕ್ಷಣ ಮನೆ ಕಟ್ಟಿಕೊಂಡ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿಲಿಲ್ಲ ಎಂದರೆ, ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಲಾಗುವುದು. ಇದರಿಂದಾಗುವ ಎಲ್ಲ ಅನಾಹುತಗಳಿಗೆ ಸರ್ಕಾರವೆ ಹೊಣೆಯಾಗುತ್ತೆ ಎಂದು ಖಂಡ್ರೆ ಎಚ್ಚರಿಸಿದರು.

ABOUT THE AUTHOR

...view details