ಬೀದರ್:ಬೈಕ್ನಲ್ಲಿ ಬಂದ ಆರೋಪಿಗಳು ರಸ್ತೆಯಲ್ಲಿ ಬರುತ್ತಿದ್ದ ಒಂಟಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.
ಬೀದರ್: ನಡೆದು ಬರುತ್ತಿದ್ದ ಮಹಿಳೆಯ ಸರ ಎಗರಿಸಿದ ದರೋಡೆಕೋರರು - ಔರಾದ್ ಪೊಲೀಸ್ ಠಾಣೆ
ಪಲ್ಸರ್ ಬೈಕ್ನಲ್ಲಿ ಬಂದ ಆರೋಪಿಗಳು ರಸ್ತೆಯಲ್ಲಿ ಬರುತ್ತಿದ್ದ ಒಂಟಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.
escape from a gang of robbers in bidar
ಜಿಲ್ಲೆಯ ಔರಾದ್ ಪಟ್ಟಣದ ಟೀಚರ್ಸ್ ಕಾಲೊನಿಯ ಸಂಗೀತಾ ಖಂಡೆ ಎಂಬುವರು ಸರ ಕಳೆದುಕೊಂಡವರು. ಮುಂಜಾನೆ ನಡೆದು ಹೋಗುತ್ತದ್ದ ವೇಳೆ ಏಕಾಏಕಿ ಬೈಕ್ನಲ್ಲಿ ಬಂದ ಆರೋಪಿಗಳು ಚಿನ್ನದ ಚೈನ್ ಕಿತ್ತುಕೊಂಡು ಪರಾರಿಯಾದರು. ಈ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದರೋಡೆಕೊರರು ಮುಖಕ್ಕೆ ಹೆಲ್ಮೆಟ್ ಹಾಕಿಕೊಂಡಿದ್ದರು. ಕತ್ತಿನಲ್ಲಿ 5 ತೊಲ ಚಿನ್ನದ ಸರ ಹಾಕಿಕೊಂಡಿ ಸಂಗೀತಾ ಅವರು ಕಳ್ಳರನ್ನು ಪತ್ತೆ ಹಚ್ಚುವಂತೆ ಔರಾದ್ ಠಾಣೆಯ ಪೊಲೀಸರಿಗೆ ಸಂಗೀತಾ ಅವರು ದೂರು ನೀಡಿದ್ದಾರೆ.