ಕರ್ನಾಟಕ

karnataka

ETV Bharat / state

ಬಸವಕಲ್ಯಾಣದಲ್ಲಿ ನಾವಂತೂ ರೆಡಿ.. ನಾಳೆ ಬಂದು ಮತದಾನ ಮಾಡಿ ಅಂತಿದೆ ಜಿಲ್ಲಾಡಳಿತ..

1568 ಮತಗಟ್ಟೆ ಅಧಿಕಾರಿಗಳು,1000ಕ್ಕೂ ಅಧಿಕ ಪೊಲೀಸರು 20 ಪಿಎಸ್ಐಗಳು 5 ಜನ ಇನ್ಸ್​ಪೆಕ್ಟರ್, ಇಬ್ಬರು ಡಿವೈಎಸ್​ಪಿ ಸೇರಿ 50 ಗೃಹ ರಕ್ಷಕ ದಳದ ಸಿಬ್ಬಂದಿ, 6 ಕೆಎಸ್ಆರ್​ಪಿ ತುಕಡಿ ಒಂದು ಸೆಂಟ್ರಲ್ ಆರ್ಮ್ ಪೊಲೀಸ್, 26 ಸೆಕ್ಟರ್ ಅಧಿಕಾರಿಗಳು, 50 ಜನ ಮೈಕ್ರೋ ಅಬಜರ್ವರ್ ನಿಯೋಜಿಸಲಾಗಿದೆ..

By

Published : Apr 16, 2021, 8:20 PM IST

Basavakalyana by-election
ಬಸವಕಲ್ಯಾಣದಲ್ಲಿ ನಾಳೆ ಬೈ ಎಲೆಕ್ಷನ್​ ಓಟಿಂಗ್

ಬೀದರ್: ಬಸವಕಲ್ಯಾಣ ಉಪ ಚುನಾವಣೆಗೆ ನಾಳೆ ಮತದಾನ ನಡೆಯಲಿದೆ. ಚುನಾವಣೆಯ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಇಲ್ಲಿ 2,39,782 ಮತದಾರರಿದ್ದಾರೆ. 326 ಮತಗಟ್ಟೆಯಲ್ಲಿ ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ರಾಮಚಂದ್ರನ್.ಆರ್ ಹೇಳಿದ್ದಾರೆ.

ಬಸವಕಲ್ಯಾಣದಲ್ಲಿ ನಾಳೆ ಬೈ ಎಲೆಕ್ಷನ್​ ವೋಟಿಂಗ್..

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾತನಾಡಿದ ಅವರು, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದಲ್ಲಿ 1,24,000 ಪುರುಷ ಹಾಗೂ 1,14,000 ಮಹಿಳಾ ಮತದಾರರಿದ್ದಾರೆ. 95 ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ.

ಚುನಾವಣೆ ಹಿನ್ನೆಲೆ ಸೆಕ್ಷನ್ 144 ಹಾಗೂ 144(A) ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಾರ್ವಜನಿಕರು 5ಕ್ಕಿಂತ ಹೆಚ್ಚು ಜನ ಒಂದೆಡೆ ಸೇರಲು ಅವಕಾಶ ಇರಲ್ಲ. ಕ್ಷೇತ್ರದ ಮತದಾರರಲ್ಲದವರನ್ನು ಬಿಟ್ಟು ಹೋಗುವಂತೆ ಕ್ರಮಕೈಗೊಳ್ಳಲಾಗಿದೆ.

1568 ಮತಗಟ್ಟೆ ಅಧಿಕಾರಿಗಳು,1000ಕ್ಕೂ ಅಧಿಕ ಪೊಲೀಸರು 20 ಪಿಎಸ್ಐಗಳು 5 ಜನ ಇನ್ಸ್​ಪೆಕ್ಟರ್, ಇಬ್ಬರು ಡಿವೈಎಸ್​ಪಿ ಸೇರಿ 50 ಗೃಹ ರಕ್ಷಕ ದಳದ ಸಿಬ್ಬಂದಿ, 6 ಕೆಎಸ್ಆರ್​ಪಿ ತುಕಡಿ ಒಂದು ಸೆಂಟ್ರಲ್ ಆರ್ಮ್ ಪೊಲೀಸ್, 26 ಸೆಕ್ಟರ್ ಅಧಿಕಾರಿಗಳು, 50 ಜನ ಮೈಕ್ರೋ ಅಬಜರ್ವರ್ ನಿಯೋಜಿಸಲಾಗಿದೆ.

ಅಲ್ಲದೆ 163 ವೆಬ್ ಕಾಸ್ಟಿಂಗ್ ಹಾಗೂ ಎರಡು ಪಿಂಕ್ ಪೋಸ್ಟ್ ಪೋಲಿಂಗ್ ಸ್ಟೇಷನ್ ಸ್ಥಾಪಿಸಲಾಗಿದೆ. ಕೋವಿಡ್-19 ವೈರಾಣು ಸೋಂಕಿನ ಹಿನ್ನೆಲೆ ಮತದಾನಕ್ಕೆ ಸಾಮಾನ್ಯವಾಗಿ 6 ಗಂಟೆವರೆಗೆ ಇದ್ದ ಸಮಯವನ್ನು ಸಂಜೆ 7 ಗಂಟೆವರೆಗೆ ವಿಸ್ತರಿಸಲಾಗಿದೆ.

ಮತದಾರರು ತಮ್ಮ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ರಾಮಚಂದ್ರನ್ .ಆರ್ ಮನವಿ ಮಾಡಿದ್ದಾರೆ.

ABOUT THE AUTHOR

...view details