ಬಸವಕಲ್ಯಾಣ: ಸಂಧ್ಯಾ ಸುರಕ್ಷಾ ಸೇರಿದಂತೆ ವಿವಿಧ ವೃದ್ಧಾಪ್ಯ ವೇತನ ಯೋಜನೆಯಡಿ ಮಂಜೂರಾಗಿರುವ ಮಾಸಾಶನ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಶಾಸಕರ ಎದುರು ಒತ್ತಾಯಿಸಿದ ಪ್ರಸಂಗ ತಾಲೂಕಿನ ರಾಜೇಶ್ವರದಲ್ಲಿ ನಡೆದಿದೆ.
8ತಿಂಗಳು ಕಳೆದರೂ ಬಾರದ ಮಾಸಾಶನ: ಶಾಸಕರೆದುರು ಅಳಲು ತೋಡಿಕೊಂಡ ಗ್ರಾಮಸ್ಥರು..! - ಮಾಸಾಶನ ಹಣ ಪಾವತಿಗೆ ಕ್ರಮ
ಸಂಧ್ಯಾ ಸುರಕ್ಷಾ ಸೇರಿದಂತೆ ವಿವಿಧ ವೃದ್ಧಾಪ್ಯ ವೇತನ ಯೋಜನೆಯಡಿ ಮಂಜೂರಾಗಿರುವ ಮಾಸಾಶನ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಶಾಸಕರ ಎದುರು ಒತ್ತಾಯಿಸಿದ ಪ್ರಸಂಗ ತಾಲೂಕಿನ ರಾಜೇಶ್ವರದಲ್ಲಿ ನಡೆದಿದೆ.
![8ತಿಂಗಳು ಕಳೆದರೂ ಬಾರದ ಮಾಸಾಶನ: ಶಾಸಕರೆದುರು ಅಳಲು ತೋಡಿಕೊಂಡ ಗ್ರಾಮಸ್ಥರು..! Eight months spent unreleased govt fund bidar](https://etvbharatimages.akamaized.net/etvbharat/prod-images/768-512-7005089-720-7005089-1588250818147.jpg)
ಕೊರೊನಾ ಹಿನ್ನೆಲೆ ಮುಂಜಾಗ್ರತಾ ಕ್ರಮಗಳ ಕುರಿತು ಕ್ಷೇತ್ರದ ಸ್ಥಿತಿಗತಿ ಅರಿಯಲು ಗ್ರಾಮಕ್ಕೆ ಆಗಮಿಸಿದ ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಅವರನ್ನು ಭೇಟಿ ಮಾಡಿದ ಗ್ರಾಮಸ್ಥರು, ಮಾಸಾಶನ ಹಣ ಬಿಡುಗಡೆಗೆ ಸೂಚಿಸಬೇಕು ಎಂದು ಮನವಿ ಮಾಡಿದರು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟದಲ್ಲಿರುವ ಬಡಜನರಿಗೆ ಕಳೆದ 6 ರಿಂದ 8 ತಿಂಗಳುಗಳಿಂದ ಮಾಶಾಸನ ಹಣ ಬಂದಿಲ್ಲ. ಈ ಕುರಿತು ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಪಡಿತರ ಚೀಟಿ ಹೊಂದಿಲ್ಲದವರಿಗೂ ಆಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ, ಕೆಲವರು ಮನವಿ ಮಾಡಿದರು. ಗ್ರಾಮಸ್ಥರ ಸಮಸ್ಯೆ ಆಲಿಸಿದ ಶಾಸಕರು, ಮಾಶಾಸನ ಹಣ ಬಿಡುಗಡೆಗೆ ತಕ್ಷಣಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿಯೇ ಇದ್ದ ತಹಶೀಲ್ದಾರ್ ಸಾವಿತ್ರಿ ಸಲಗರ್ ಅವರಿಗೆ ಸೂಚಿಸಿದರು.