ಕರ್ನಾಟಕ

karnataka

ETV Bharat / state

ವೈದ್ಯರ ನಿರ್ಲಕ್ಷದಿಂದ ಹೆರಿಗೆ ವೇಳೆ ಮಗು ಸಾವು ಪ್ರಕರಣ; ಕ್ರಮಕ್ಕೆ ಡಿಎಸ್​ಎಸ್ ಒತ್ತಾಯ

ಕಳೆದ ತಿಂಗಳ 25 ರಂದು ಹೆರಿಗೆಗಾಗಿ ರಾಜೇಶ್ವರ ಗ್ರಾಮದ ಪ್ರೇಮಕುಮಾರ ತನ್ನ ಪತ್ನಿಯನ್ನು ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ ಹೆರಿಗೆ ದಿನಾಂಕ ಇನ್ನು ಮುಂದಕ್ಕೆ ಇದೆ ಎಂದು ಹೇಳಿ ಮನೆಗೆ ಕಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಸ್ಪಂದಿಸದ ಕಾರಣ ಮಗು ಮೃತಪಟ್ಟಿರುವುದಾಗಿ ಆರೋಪಿಸಲಾಗಿದೆ.

DSS insist
ಡಿಎಸ್​ಎಸ್ ಒತ್ತಾಯ

By

Published : Nov 3, 2020, 10:07 PM IST

ಬಸವಕಲ್ಯಾಣ(ಬೀದರ್):ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ವೈದ್ಯರ ನಿರ್ಲಕ್ಷದಿಂದ ಮಗುವೊಂದು ಹೊರ ಜಗತ್ತು ನೋಡುವ ಮುನ್ನವೇ ಮೃತಪಟ್ಟಿದೆ. ನಿರ್ಲಕ್ಷ ವಹಿಸಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿಯ ವಿವಿಧ ದಲಿತ ಪರ ಸಂಘಟನೆಗಳು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಆರೋಗ್ಯ ಇಲಾಖೆ ವಿಭಾಗಿಯ ಉಪ ನಿರ್ದೇಶಕ ಡಾ. ಶಂಕ್ರೇಪ್ಪಾ ಮೈಲಾರೆ ಅವರನ್ನು ಭೇಟಿ ಮಾಡಿದ ಇಲ್ಲಿಯ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ವಾಮನ್ ಮೈಸಲಗೆ, ಡಿಎಸ್‌ಎಫ್ ತಾಲೂಕು ಸಂಚಾಲಕ ಮಲ್ಲಿಕಾರ್ಜುನ ಮಾಲೆ ನೇತೃತ್ವದ ಪ್ರಮುಖರ ನಿಯೋಗ ಒತ್ತಾಯಿಸಿದೆ.

ಕಳೆದ ತಿಂಗಳ 25 ರಂದು ಹೆರಿಗೆಗಾಗಿ ರಾಜೇಶ್ವರ ಗ್ರಾಮದ ಪ್ರೇಮಕುಮಾರ ತನ್ನ ಪತ್ನಿಯನ್ನು ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ ಹೆರಿಗೆ ದಿನಾಂಕ ಇನ್ನು ಮುಂದಕ್ಕೆ ಇದೆ ಎಂದು ಹೇಳಿ ಮನೆಗೆ ಕಳಿಸಿದ್ದಾರೆ. ಆದರೆ ಮತ್ತೆ 31 ರಂದು ಸರ್ಕಾರಿ ಆಸ್ಪತ್ರೆಗೆ ಬಂದಾಗಲೂ ಕೂಡ ಸರಿಯಾಗಿ ಸ್ಪಂದಿಸದ ಕಾರಣ, ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿ ಹೆರಿಗೆ ಮಾಡಿಸಿದರು ಕೂಡ ಮಗು ಬದುಕುಳಿಯಲಿಲ್ಲ.

ಜಗತ್ತು ನೋಡುವ ಮುನ್ನವೇ ಹೆಣ್ಣು ಮಗುವಿನ ಸಾವಿಗೆ ಸರ್ಕಾರಿ ಆಸ್ಪತ್ರೆ ವೈದ್ಯರೇ ನೇರ ಹೊಣೆಯಾಗಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಹೆರಿಗೆಗೆಂದು ಬರುವ ಅನೇಕ ಜನ ಬಡ ಮಹಿಳೆಯರಿಗೂ ಇದೇ ರೀತಿ ಅನ್ಯಾಯವಾಗುತ್ತಿದೆ. ನಿರ್ಲಕ್ಷ ವಹಿಸುವ ಸರ್ಕಾರಿ ಆಸ್ಪತ್ರೆಯ ವೈದ್ಯರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಡಿಎಸ್‌ಎಸ್ ಸಂಘಟನೆಯ ತಾಲೂಕು ಸಂಚಾಲಕ ವಾಮನ್ ಮೈಸಲಗೆ, ಡಿಎಸ್‌ಎಫ್ ಸಂಚಾಲಕ ಮಲ್ಲಿಕಾರ್ಜುನ ಮಾಲೆ, ಪ್ರಮುಖರಾದ ಪ್ರೇಮಕುಮಾರ ಬುಡಕೆ, ರಾಹುಲ್ ಫೂಲೆ, ಶಂಕರ್ ಫುಲೆ ಸೇರಿದಂತೆ ಪ್ರಮುಖರು ನಿಯೋಗದಲಿದ್ದರು. ಟಿಎಚ್‌ಓ ಡಾ: ಪ್ರವೀಣಕುಮಾರ ಹುಗಾರ, ಸಿಎಂಓ ಡಾ: ಅಪರ್ಣಾ ಮಹಾನಂದ್ ಇದ್ದರು.

ABOUT THE AUTHOR

...view details