ಬಸವಕಲ್ಯಾಣ(ಬೀದರ್):ಮದ್ಯದ ಅಮಲಿನಲ್ಲಿ ಯುವಕನ್ನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸಸ್ತಾಪೂರ ಗ್ರಾಮದಲ್ಲಿ ನಡೆದಿದೆ.
ಮದ್ಯದ ಅಮಲಿನಲ್ಲಿ ನೇಣು ಕುಣಿಕೆಗೆ ಕೊರಳೊಡ್ಡಿದ ಯುವಕ - ಬಸವಕಲ್ಯಾಣ ಆತ್ಮಹತ್ಯೆ ಸುದ್ದಿ
ಕುಡಿದ ನಶೆಯಲ್ಲಿ ಯುವಕನ್ನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವ ಕಲ್ಯಾಣದಲ್ಲಿ ನಡೆದಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![ಮದ್ಯದ ಅಮಲಿನಲ್ಲಿ ನೇಣು ಕುಣಿಕೆಗೆ ಕೊರಳೊಡ್ಡಿದ ಯುವಕ suicide](https://etvbharatimages.akamaized.net/etvbharat/prod-images/768-512-7635658-thumbnail-3x2-jayjpg.jpeg)
ಆತ್ಮಹತ್ಯೆ
ಗ್ರಾಮದ ಸಂತೋಷ ತುಕಾರಾಮ ಬೊಬಡೆ(32) ಆತ್ಮಹತ್ಯೆಗೆ ಶರಣಾದ ಯುವಕ. ನಿತ್ಯ ಮದ್ಯ ಕುಡಿದು ಮನೆಯವರೊಂದಿಗೆ ಗಲಾಟೆ ಮಾಡುತಿದ್ದ ಈತ, ಸೋಮವಾರ ಮಧ್ಯಾಹ್ನ ತನ್ನ ಹೊಲದಲ್ಲಿನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದು ಪಿಎಸ್‌ಐ ಸುನಿಲ್ ಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.