ಬಸವಕಲ್ಯಾಣ(ಬೀದರ್):ನಿಯಂತ್ರಣ ತಪ್ಪಿ ಚಲಿಸುತಿದ್ದ ಟ್ರ್ಯಾಕ್ಟ್ರರ್ನಿಂದ ಬಿದ್ದು ಚಾಲಕ ಮೃತಪಟ್ಟ ಘಟನೆ ತಾಲೂಕಿನ ಬಂಡಗರವಾಡಿ ಸಮಿಪ ನಡೆದಿದೆ.
ಬಸವಕಲ್ಯಾಣ: ಚಲಿಸುತಿದ್ದ ಟ್ರ್ಯಾಕ್ಟ್ರರ್ನಿಂದ ಬಿದ್ದು ಚಾಲಕ ಸಾವು!
ಅಡ್ಡಾದಿಡ್ಡಿ ಓಡಲು ಶುರುಮಾಡಿದ ಟ್ರಾಕ್ಟ್ರರ್ನಿಂದ ಪ್ರಾಣ ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಕೆಳಗೆ ಹಾರಿದ ಚಾಲಕ ಟ್ರಾಕ್ಟ್ರರ್ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಬೀದರ್ನಲ್ಲಿ ನಡೆದಿದೆ.
ನರತಪಟ್ಟ ಚಾಲಕ ಈರಣ್ಣ ಜಮಾದಾರ
ತಾಲೂಕಿನ ಕೋಹಿನೂರವಾಡಿ ಗ್ರಾಮದ ಸಾಯಿಬಣ್ಣ ಈರಣ್ಣ ಜಮಾದಾರ (34) ಮೃತ ಟ್ರ್ಯಾಕ್ಟ್ರರ್ ಚಾಲಕ. ತಗ್ಗು ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಟ್ರ್ಯಾಕ್ಟ್ರರ್ ಚಾಲನೆ ಮಾಡಿಕೊಂಡು ಬರುತಿದ್ದ ವೇಳೆ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಓಡಲು ಶುರುಮಾಡಿದೆ. ಪ್ರಾಣ ರಕ್ಷಿಸಿಕೊಳ್ಳುವ ಪ್ರಯತ್ನದಿಂದ ಟ್ರ್ಯಾಕ್ಟ್ರರ್ನಿಂದ ಈರಣ್ಣ ಜಿಗಿದಿದ್ದಾನೆ. ಆದರೆ ಚಕ್ರಕ್ಕೆ ಸಿಲುಕಿ ಈರಣ್ಣ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಮಹೇಶಗೌಡ ಪಾಟೀಲ, ಪಿಎಸ್‌ಐ ಅರುಣಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.