ಕರ್ನಾಟಕ

karnataka

ETV Bharat / state

ಕಾರಂಜಾ ಜಲಾಶಯದಿಂದ ಹಾಲಹಳ್ಳಿ ಬ್ಯಾರೇಜ್​ಗೆ ನೀರು: ಡಿಸಿ ಚಾಲನೆ

ಭಾಲ್ಕಿ ತಾಲೂಕಿನ ಮಾಸಿಮಾಡ ಗ್ರಾಮದ ಬಳಿಯ ಬ್ಯಾರೇಜ್​ನ ಗೇಟ್​ಗಳನ್ನು ಇದೇ ಮೊದಲ ಬಾರಿಗೆ ತೆರೆಯುವ ಮೂಲಕ ಭಾಲ್ಕಿ ಹಾಗೂ ಔರಾದ್ ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರಿನ ಪೂರೈಸಲು ಬೀದರ್ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದಾರೆ.

Drive water from Karanja Reservoir to Hallahalli Barrage
ಕಾರಂಜಾ ಜಲಾಶಯದಿಂದ ಹಾಲಹಳ್ಳಿ ಬ್ಯಾರೇಜ್​ಗೆ ನೀರು ಹರಿಸುವ ಕಾರ್ಯಾಚರಣೆಗೆ ಚಾಲನೆ

By

Published : Mar 29, 2021, 7:32 AM IST

ಬೀದರ್:ಕಾರಂಜಾ ಜಲಾಶಯದಿಂದ ಅಂದಾಜು 110 ಕಿ.ಮೀ ದೂರದಲ್ಲಿರುವ ಹಾಲಹಳ್ಳಿ ಬ್ಯಾರೇಜ್​ಗೆ ನೀರು ಹರಿಸುವ ಕಾರ್ಯಕ್ಕೆ ಜಿಲ್ಲಾಧಿಕಾರಿ ರಾಮಚಂದ್ರನ್ ಚಾಲನೆ ನೀಡಿದರು.

ಕಾರಂಜಾ ಜಲಾಶಯದಿಂದ ಹಾಲಹಳ್ಳಿ ಬ್ಯಾರೇಜ್​ಗೆ ನೀರು ಹರಿಸುವ ಕಾರ್ಯಾಚರಣೆಗೆ ಚಾಲನೆ

ಜಿಲ್ಲೆಯ ಭಾಲ್ಕಿ ತಾಲೂಕಿನ ಮಾಸಿಮಾಡ ಗ್ರಾಮದ ಬಳಿಯ ಬ್ಯಾರೇಜ್​ನ ಗೇಟ್​ಗಳನ್ನು ಇದೇ ಮೊದಲ ಬಾರಿಗೆ ತೆರೆಯುವ ಮೂಲಕ ಭಾಲ್ಕಿ ಹಾಗೂ ಔರಾದ್ ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರಿನ ಪೂರೈಸಲು ಕ್ರಮ ಕೈಗೊಂಡಿದ್ದಾರೆ.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಕಾರಂಜಾ ಜಲಾಶಯದಿಂದ ದಾಡಗಿ ಬ್ಯಾರೇಜ್ ಮೂಲಕ ಭಾಲ್ಕಿ ನಗರಕ್ಕೆ ಮತ್ತು ಹಾಲಹಳ್ಳಿ ಬ್ಯಾರೇಜ್​ನಿಂದ ಔರಾದ್ ಪಟ್ಟಣಕ್ಕೆ ನೀರು ಹರಿಸುವ ಉದ್ದೇಶದಿಂದ 0.09 ಟಿಎಂಸಿ ನೀರನ್ನು ಕಾರಂಜಾ ನದಿಯಿಂದ ಬಿಡುಗಡೆ ಮಾಡಲಾಗಿದೆ. ಮಾರ್ಚ್ 29ರ ಸಂಜೆ 7 ಗಂಟೆವರೆಗೆ ನೀರು ಬಿಡಿಸಲಾಗುವುದು ಎಂದರು.

ನೀರು ಹಾದು ಹೋಗುವ ಮಧ್ಯೆ ಬರುವ 15 ಬ್ಯಾರೇಜ್​ಗಳಲ್ಲಿ ನೀರನ್ನು ಕನಿಷ್ಠ ಪ್ರಮಾಣದಲ್ಲಿ ತುಂಬಿಸಿ, ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ಇದರಿಂದಾಗಿ ಅಂತರ್ಜಲದ ಪುನಶ್ಚೇತನವೂ ಆಗಬೇಕೆಂಬುದು ನಮ್ಮ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಬಿಸಿಲಿನ ಪ್ರಮಾಣ ನಿತ್ಯ ಹೆಚ್ಚುತ್ತಿದೆ. ಹೀಗಾಗಿ, ಬೇಸಿಗೆಯ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಉದ್ದೇಶದಿಂದಾಗಿ ಈ ವ್ಯವಸ್ಥೆ ಮಾಡಲಾಗಿದೆ. ನೀರು ಮಿತವಾಗಿ ಬಳಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕಾರಂಜಾ ನದಿಗೆ ಅಡ್ಡಲಾಗಿ ಅಂತರ್ಜಲ ಅಭಿವೃದ್ದಿ ಮತ್ತು ಸಣ್ಣ ನೀರಾವರಿ ಇಲಾಖೆ ಮತ್ತು ಕೃಷ್ಣ ಭಾಗ್ಯ ಜಲನಿಗಮದಿಂದ ನಿರ್ಮಿಸಲಾದ ಸೇತುವೆಗಳು, ಬ್ರಿಡ್ಜ್ ಕಂ ಬ್ಯಾರೇಜ್​ಗಳು ಹಾಗೂ ಮಹಾರಾಷ್ಟ್ರದಿಂದ ನಿರ್ಮಿಸಲಾದ ಸಿಂದಿಕಮಟ ಬ್ಯಾರೇಜ್​ನ ಗೇಟ್​ಗಳನ್ನು ತೆರೆದು ನೀರು ಸುಗಮವಾಗಿ ಸಾಗಲು ಕ್ರಮ ತೆಗೆದುಕೊಳ್ಳಬೇಕೆಂದು ಈಗಾಗಲೇ ಸಂಬಂಧಿಸಿದವರಿಗೆ ಸೂಚಿಸಿ ಕ್ರಮ ವಹಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಕಾರ್ಯಪಾಲಕ ಅಭಿಯಂತರರಾದ ರವಿಕಿರಣ್ ಪೆಬ್ಬಾ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.

ಓದಿ:ನಾಲೆಗೆ ಬಿದ್ದ ಮದುವೆ ದಿಬ್ಬಣಕ್ಕೆ ಹೊರಟ್ಟಿದ್ದ ಟಾಟಾ ಏಸ್​ : ಇಬ್ಬರ ಸಾವು, 25 ಮಂದಿ ಗಾಯ

ABOUT THE AUTHOR

...view details