ಕರ್ನಾಟಕ

karnataka

ETV Bharat / state

ದಂಡೆ ದಂಪತಿಗೆ ಡಾ.ಎಂ.ಎಂ.ಕಲಬುರಗಿ ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿ - ಡಾ. ಜಯಶ್ರೀ ದಂಡೆ ಹಾಗೂ ಡಾ. ವೀರಣ್ಣ ದಂಡೆ ದಂಪತಿಗೆ ಡಾ.ಎಂ.ಎಂ.ಕಲಬುರಗಿ ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿ

ಖ್ಯಾತ ಸಂಶೋಧಕ ದಿ. ಡಾ. ಎಂ.ಎಂ. ಕಲಬುರಗಿ ಸ್ಮರಣಾರ್ಥ ಸಂಶೋಧನಾ ಕ್ಷೇತ್ರದಲ್ಲಿ ಸಾಧಕರನ್ನು ಗುರುತಿಸಿ ಅನುಭವ ಮಂಟಪ ಟ್ರಸ್ಟ್​ನಿಂದ ನೀಡಲಾಗುವ ಡಾ.ಎಂ.ಎಂ.ಕಲಬುರಗಿ ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿಯನ್ನು ಡಾ. ಜಯಶ್ರೀ ದಂಡೆ ಹಾಗೂ ಡಾ. ವೀರಣ್ಣ ದಂಡೆ ದಂಪತಿಗೆ ನೀಡಿ ಗೌರವಿಸಲಾಯಿತು.

ದಂಡೆ ದಂಪತಿಗೆ ಡಾ.ಎಂ.ಎಂ.ಕಲಬುರಗಿ ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿ..

By

Published : Nov 25, 2019, 7:19 AM IST

ಬಸವಕಲ್ಯಾಣ:ಖ್ಯಾತ ಸಂಶೋಧಕ ದಿ. ಡಾ. ಎಂ.ಎಂ. ಕಲಬುರಗಿ ಸ್ಮರಣಾರ್ಥ ಸಂಶೋಧನಾ ಕ್ಷೇತ್ರದಲ್ಲಿ ಸಾಧಕರನ್ನು ಗುರುತಿಸಿ ಅನುಭವ ಮಂಟಪ ಟ್ರಸ್ಟ್​ನಿಂದ ನೀಡಲಾಗುವ ಡಾ.ಎಂ.ಎಂ.ಕಲಬುರಗಿ ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿಯನ್ನು ಡಾ. ಜಯಶ್ರೀ ದಂಡೆ ಹಾಗೂ ಡಾ. ವೀರಣ್ಣ ದಂಡೆ ದಂಪತಿಗೆ ನೀಡಿ ಗೌರವಿಸಲಾಯಿತು.

ಅನುಭವ ಮಂಟಪ ಉತ್ಸವ ಹಾಗೂ 40 ನೇ ಶರಣ ಕಮ್ಮಟದ ಎರಡನೇ ದಿನವಾದ ಭಾನುವಾರ ನಡೆದ ಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರಾದ ಡಾ.ಜಯಶ್ರೀ ದಂಡೆ ಮಾತನಾಡಿ, 12 ನೇ ಶತಮಾನದಲ್ಲಿಯೇ ಜಾತ್ಯಾತೀತ ರಾಷ್ಟ್ರ ನಿರ್ಮಾಣ ಮಾಡಿದ ಬಸವಣ್ಣವರು ಕಾಯಕ ಮತ್ತು ದಾಸೋಹಕ್ಕೆ ಮಹತ್ವ ನೀಡುವ ಮೂಲಕ ನುಡಿದಂತೆ ನಡೆದವರು. ವಚನ ಸಾಹಿತ್ಯ ರಚಿಸುವ ಮೂಲಕ ಮನು ಕುಲದ ಉದ್ದಾರಕ್ಕಾಗಿ ಚಿಂತಿಸಿದ ಕೀರ್ತಿ ಶರಣರಿಗೆ ಸಲ್ಲುತ್ತದೆ ಎಂದರು.

ದಂಡೆ ದಂಪತಿಗೆ ಡಾ.ಎಂ.ಎಂ.ಕಲಬುರಗಿ ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿ..

ಡಾ. ಎಂ.ಎಂ ಕಲಬುರಗಿ ಅವರು ನಾಡು, ದೇಶ ಕಂಡ ಅಪರೂಪದ ವ್ಯಕ್ತಿಗಳಾಗಿದ್ದರು. ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಚಿಂತನೆಗಳು ಶಾಶ್ವತವಾಗಿ ಉಳಿದಿವೆ. ಅವರ ಹೆಸರಿನ ಪ್ರಶಸ್ತಿ ಪಡೆದು ಧನ್ಯನಾದೆ ಎಂದರು.

ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದೇವರು, ಶ್ರೀ ಗುರುಬಸವ ಪಟ್ಟದೇವರು, ಶ್ರೀ ಮಹಾಲಿಂಗ ಸ್ವಾಮಿ, ಜಿಪಂ ಅಧ್ಯಕ್ಷೆ ಗೀತಾ ಪಂಡಿತ ಚಿದ್ರಿ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ವಿಜಯಲಕ್ಷ್ಮೀ ಕೌಟಗೆ, ಮೇನಕಾ ಪಾಟೀಲ, ಜಯಶ್ರೀ ತಾಯಿ, ಶಿವರಾಜ ನರಶೆಟ್ಟಿ, ಪಂಡಿತ ಚಿದ್ರಿ, ರಾಜಶೇಖರ ತಂಬಾಕೆ, ಡಾ.ರವೀಂದ್ರ ಭಾಲ್ಕೆ, ಆನಂದ ದೇವಪ್ಪಾ, ಸುರೇಶ ಚನ್ನಶಟ್ಟಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ABOUT THE AUTHOR

...view details