ಬೀದರ್ :ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸೋಂಕು ಬಾಧಿತರ ಚಿಕಿತ್ಸೆ ಹಾಗೂ ಆರೈಕೆಗಾಗಿ ಒಟ್ಟು 7 ಭಾಗದಲ್ಲಿ 905 ಕೋವಿಡ್ ಕೇರ್ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ಹೇಳಿದ್ದಾರೆ.
ಓದಿ: ಕೋವಿಡ್ ನಿಯಂತ್ರಣ ಸಂಬಂಧ ಸಭೆ ನಡೆಸಲು ಅನುಮತಿ ಕೊಡಿ: ಚುನಾವಣಾ ಆಯೋಗಕ್ಕೆ ಪತ್ರ ಬರೆದ ಸಚಿವ
ಈ ಕುರಿತು ಅಧಿಸೂಚನೆ ಹೊರಡಿಸಿದ ಅವರು ಕೋವಿಡ್-19 ಪ್ರಕರಣಗಳನ್ನು ತಡೆಗಟ್ಟಲು ಮೂರು ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ. ಲಕ್ಷಣರಹಿತ ವ್ಯಕ್ತಿಗಳ ಚಿಕಿತ್ಸೆ, ಸೌಮ್ಯ ಹಾಗೂ ಮಧ್ಯಮ ರೋಗಲಕ್ಷಣದ ವ್ಯಕ್ತಿಗಳ ಚಿಕಿತ್ಸೆ ಮತ್ತು ತೀವ್ರ ಅಸ್ವಸ್ಥ ರೋಗಿಗಳ ಚಿಕಿತ್ಸೆಗಾಗಿ ಪ್ರತ್ಯೇಕ ವಿಭಾಗಗಳನ್ನು ಮಾಡಲಾಗಿದೆ ಎಂದರು.
ಕೋವಿಡ್ ಹಾಸಿಗೆಗಳು ಎಲ್ಲೆಲ್ಲಿ? :ಬೀದರ್ ನಗರದ ಝೀರಾ ಕನ್ವೇನ್ಷನಲ್ ಹಾಲ್‌ನಲ್ಲಿ 200, ಶಾಹೀನ್ ಪಿಯು ಕಾಲೇಜಿನಲ್ಲಿ 115, ಗೊಲೆಖಾನಾದ ಶಾಹಿನ್ ಪಿ ಯು ಕಾಲೇಜಿನಲ್ಲಿ 100, ಬಸವಕಲ್ಯಾಣ ತಾಲೂಕಿನ ಖಾನಾಪೂರ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 250, ಹುಮನಾಬಾದ್‌ನ ರಾಜರಾಜೇಶ್ವರಿ ಆಯುರ್ವೇದ ಕಾಲೇಜಿನಲ್ಲಿ 50, ಔರಾದ್‌ನ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 90 ಹಾಗೂ ಡಾ. ಬಿ ಆರ್ ಅಂಬೇಡ್ಕರ ವಸತಿ ಶಾಲೆ ಭಾಲ್ಕಿಯಲ್ಲಿ 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ.