ಕರ್ನಾಟಕ

karnataka

ETV Bharat / state

ಲಾಕ್‌ಡೌನ್ ಮುಗಿಯುವವರೆಗೂ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಹಾಲು ವಿತರಣೆ.. - ಬಡ ಕುಟುಂಬಗಳಿಗೆ ಹಾಲು ವಿತರಣೆ

ಯಾರೂ ಅನಗತ್ಯ ಮನೆಯಿಂದ ಹೊರ ಬರಬಾರದು. ಕೈಮುಗಿದು ಕೇಳ್ತೀನಿ ಮನೆಯಲ್ಲೇ ಇರಿ, ಸೋಂಕು ಹರಡದಂತೆ ಮುನ್ನೆಚ್ಚರಿಕವಹಿಸಿ ಎಂದು ಮನವಿ ಮಾಡಿದರು.

Distribution of Milk to Poor Families
ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್

By

Published : Apr 3, 2020, 4:05 PM IST

ಬೀದರ್ :ಲಾಕ್‌ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬಗಳಿಗೆ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್​ ಹಾಲು ವಿತರಣೆ ಮಾಡಿದರು. ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಹಾಲು ವಿತರಣೆ ಮಾಡಿದ ಅವರು, ಲಾಕ್‌ಡೌನ್ ಮುಗಿಯುವವರೆಗೆ ನಿತ್ಯ ಬಡ ಕುಟುಂಬಗಳ ಮನೆ ಬಾಗಿಲಿಗೆ ನಂದಿನ ಹಾಲಿನ ಪ್ಯಾಕೇಟ್​ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕೊರೊನಾ ವೈರಸ್ ತಡೆಯಲು ಜನರ ಸಹಕಾರ ಬೇಕಿದೆ. ಯಾರೂ ಅನಗತ್ಯ ಮನೆಯಿಂದ ಹೊರ ಬರಬಾರದು. ಕೈಮುಗಿದು ಕೇಳ್ತೀನಿ ಮನೆಯಲ್ಲೇ ಇರಿ, ಸೋಂಕು ಹರಡದಂತೆ ಮುನ್ನೆಚ್ಚರಿಕವಹಿಸಿ ಎಂದು ಮನವಿ ಮಾಡಿದರು.

ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್..

ಅಲ್ಲದೆ ಸಂಕಟದಲ್ಲಿರುವ ಜನರ ಸಹಾಯಕ್ಕೆ ಶ್ರೀಮಂತರು ಬರಬೇಕಿದೆ. ನಾನು ನನ್ನ ಮೂರು ತಿಂಗಳ ವೇತನ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದೇನೆ. ಸಾರ್ವಜನಿಕರು ತಮ್ಮಿಂದಾದಷ್ಟು ಸಹಾಯ ಮಾಡಲು ಮುಂದೆ ಬರಬೇಕು ಎಂದು ವಿನಂತಿಸಿದರು.

ABOUT THE AUTHOR

...view details