ಬಸವಕಲ್ಯಾಣ: ಕೊರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ನಗರದ ರಾಜಾಬಾಗ ಸವಾರ ದರ್ಗಾದಲ್ಲಿ ಹಜರತ್ ಶೇರೆಸವಾರ್ ಬೈತುಲ್ ಮಾಲ್ ಟ್ರಸ್ಟ್ನಿಂದ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸಲಾಯಿತು.
ಹಜರತ್ ಶೇರೆಸವಾರ್ ಬೈತುಲ್ ಮಾಲ್ ಟ್ರಸ್ಟ್ನಿಂದ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಟ್ರಸ್ಟ್ ಅಧ್ಯಕ್ಷ ಖಾಜಾ ಜಿಯಾಉಲ್ ಹಸನ್ ನೇತೃತ್ವದಲ್ಲಿ ಸುಮಾರು 400 ಬಡ ಕುಟುಂಬಗಳನ್ನು ಗುರುತಿಸಿ ಪ್ರತಿ ಕುಟುಂಬಕ್ಕೆ 10 ಕೆಜಿ ಜೋಳ, 5 ಕೆಜಿ ಗೋಧಿ ಹಿಟ್ಟು, ಬೇಳೆ, ಅಡುಗೆ ಎಣ್ಣೆ, ಸಕ್ಕರೆ ತಲಾ ಒಂದು ಕೆಜಿ ಮತ್ತು ಶಾವಿಗೆ ಸೇರಿದಂತೆ ಒಟ್ಟು 12 ದಿನಸಿ ಸಾಮಾಗ್ರಿಯನ್ನೊಳಗೊಂಡ ಕಿಟ್‌ಗಳನ್ನು ವಿತರಿಸಲಾಯಿತು.
ಆಹಾರದ ಕಿಟ್ ವಿತರಣೆಗೆ ಚಾಲನೆ ನೀಡಿದ ತಹಶೀಲ್ದಾರ ಸಾವಿತ್ರಿ ಶರಣ ಸಲಗರ್ ಮಾತನಾಡಿ, ಕೊರೊನಾ ಹರಡುವ ಭೀತಿಯಿಂದ ಸರ್ಕಾರ ಜಾರಿಗೊಳಿಸಿದ ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟ ಎದುರಿಸಿದ ಬಡ ಕುಟುಂಬಗಳಿಗೆ ಕಿಟ್ ವಿತರಿಸುವ ಮೂಲಕ ಸಹಾಯಕ್ಕೆ ಮುಂದಾಗಿರುವ ಶೇರೆ ಸವಾರ್ ಬೈತುಲ್ ಮಾಲ್ ಟ್ರಸ್ಟ್ ಕಾರ್ಯ ಮಹತ್ವದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನು ನೇತೃತ್ವ ವಹಿಸಿದ್ದ ಖಾಜಾ ಜಿಯಾಉಲ್ಲ ಹಸನ್ ಜಾಗೀರದಾರ ಮಾತನಾಡಿ, ಕೊರೊನಾ ಹರಡದಂತೆ ತಡ್ಡೆಗಟ್ಟುವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಬೇಕು. ಪ್ರತಿಯೊಂದು ಸ್ಥಳದಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.