ಬಸವಕಲ್ಯಾಣ: ಹಲವು ದಿನಗಳಿಂದ ನಗರದ ಕೆಲವು ಕಡೆ ಬೀದಿ ದೀಪಗಳು ಹಾಳಗಿದ್ದು, ವಿಶಿಷ್ಟ ರೀತಿಯಲ್ಲಿ ಫಲಕಗಳನ್ನು ವಿದ್ಯುತ್ ಕಂಬಗಳಿಗೆ ಕಟ್ಟುವ ಮೂಲಕ ಇಲ್ಲಿಯ ಯುವಕರು ನಗರ ಸಭೆಯನ್ನು ಕಣ್ಣು ತೆರೆಸುವ ಕೆಲಸ ಮಾಡಿ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ.
ದಯವಿಟ್ಟು ಬೀದಿ ದೀಪ ಉರಿಯುವಂತೆ ಮಾಡಿ. ಈ ಹೈ ಮಾಸ್ಟ್ ದೀಪ ಹಲವು ದಿನಗಳಿಂದ ಉರಿಯುತ್ತಿಲ್ಲ, ದಯವಿಟ್ಟು ಉರಿಯುವಂತೆ ಮಾಡಿ. ಇದು ನಮ್ಮ ಕಳಕಳಿಯ ಮನವಿ ಎಂದು ಫಲಕಗಳಲ್ಲಿ ಬರೆಯಲಾಗಿದೆ.
ಉರಿಯದ ಬೀದಿ ದೀಪಗಳು , ಫಲಕ ಅಳವಡಿಸಿ ಗಮನ ಸೆಳೆದ ಯುವಕರು ನಗರದ ತ್ರಿಪುರಾಂತ ಪ್ರವಾಸಿ ಮಂದಿರದಿಂದ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಗಾಂಧಿ ವೃತ್ತದವರೆಗೆ ರಸ್ತೆ ವಿಭಜಕದ ಮಧ್ಯೆ ಅಳವಡಿಸಲಾದ ವಿದ್ಯುತ್ ಕಂಬಗಳಿದ್ದರು ಅವುಗಳ ಪೈಕಿ ಬಹುತೇಕ ಕಂಬಗಳಿಗೆ ಅಳವಡಿಸಲಾದ ದೀಪಗಳು ಕೆಟ್ಟು ಹೊಗಿರುವ ಕಾರಣ ರಾತ್ರಿ ವೇಳೆ ನಗರದ ರಸ್ತೆಗಳಲ್ಲಿ ಕತ್ತಲೆ ಆವರಿಸುತ್ತಿದೆ. ಬಹುದಿನಗಳಿಂದ ಉರಿಯದೆ ಬಂದ್ ಆಗಿರುವ ಬೀದಿ ದೀಪಗಳನ್ನು ಗಮನಿಸಿದ ಯುವ ಮುಖಂಡ ಶಿವಕುಮಾರ ಬಿರಾದಾರ ನೇತೃತ್ವದ ಯುವಕರ ತಂಡ, ಬಂದ್ ಆಗಿರುವ ವಿದ್ಯುತ್ ಕಂಬಗಳಿಗೆ ಫಲಕಗಳನ್ನು ಕಟ್ಟುವ ಮೂಲಕ ನಗರಸಭೆ ಹಾಗೂ ಸ್ಥಳಿಯ ಆಡಳಿತದ ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆ.
ಯುವ ಮುಖಂಡ ಶಿವಕುಮಾರ ಬಿರಾದಾರ, ಬಸವರಾಜ ಕೊರಕೆ, ಸಂಜು ಮೇಟಗೆ, ಮಹೇಶ ಸುಂಠನೂರೆ, ಜಗನ್ನಾಥ ಪಾಟೀಲ, ಸಿದ್ದು ಬೊರಗೆ, ಚೆನ್ನು ಸ್ವಾಮಿ, ಸಿದ್ದು ಬೊರಗೆ, ನಾಗರಾಜ ಮಂಗಾ, ವಿನೊದ ನಾಗವಂಶಿ, ಸಂದೀಪ ಮೆಂಗ್ಲೆ, ಸಂತೋಷ ಸಣ್ಣೂರೆ, ಪ್ರವೀಣ ಮಹಾಜನ ಸೇರಿದಂತೆ ಇತರರು ಉಪಸ್ಥಿತರಿದ್ದರು.