ಕರ್ನಾಟಕ

karnataka

ETV Bharat / state

ಶಾಸಕ ಬಿ.ನಾರಾಯಣರಾವ್​ಗೆ ಗಣ್ಯರಿಂದ ಭಾವಪೂರ್ಣ ಶ್ರದ್ಧಾಂಜಲಿ - Bidar News

ಭಾಲ್ಕಿಯ ಶ್ರೀ ಗುರುಬಸವ ಪಟ್ಟದೇವರು ಮಾತನಾಡಿ, ನಾರಾಯಣರಾವ್​ ಅವರಲ್ಲಿ ಬಸವ ತತ್ವದ ಬಗ್ಗೆಯಿದ್ದ ಕಾಳಜಿ ಮತ್ತು ಕಲ್ಯಾಣ ನಾಡನ್ನು ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಮಾಡಬೇಕೆನ್ನುವ ತುಡಿತ ಎಲ್ಲಾ ರಾಜಕೀಯ ನಾಯಕರಿಗೆ ಮಾದರಿಯಾಗಿದೆ ಎಂದು ಸ್ಮರಿಸಿದರು..

dignitaries condolence to the death of MLA B. Narayana Rao
ಶಾಸಕ ಬಿ.ನಾರಾಯಣರಾವ್​ಗೆ ಗಣ್ಯರಿಂದ ಭಾವಪೂರ್ಣ ಶೃದ್ಧಾಂಜಲಿ

By

Published : Sep 26, 2020, 9:18 PM IST

ಬಸವಕಲ್ಯಾಣ(ಬೀದರ್​):ಹಿಂದುಳಿದ ವರ್ಗಗಳ ನಾಯಕರಾಗಿದ್ದ ಶಾಸಕ ಬಿ.ನಾರಾಯಣರಾವ್​ ಅವರಿಗೆ ಬಸವತತ್ವದ ಬಗ್ಗೆ ಅಗಾಧ ತುಡಿತವಿತ್ತು. ಅವರು ಸಮಾಜದ ಬಗ್ಗೆ ಕಳಕಳಿ ಇರುವ ಒಬ್ಬ ಪ್ರಾಮಾಣಿಕ ರಾಜಕಾರಣಿಯಾಗಿದ್ದಷ್ಟೇ.. ಅಪ್ಪಟ ಬಸವತತ್ವ ಪರಿಪಾಲಕರಾಗಿದ್ದರು ಎಂದು ಹುಲಸೂರನ ಶ್ರೀ ಡಾ.ಶಿವಾನಂದ ಮಹಾ ಸ್ವಾಮೀಜಿ ಹೇಳಿದ್ದಾರೆ.

ಶಾಸಕ ಬಿ.ನಾರಾಯಣರಾವ್​ಗೆ ಗಣ್ಯರಿಂದ ಭಾವಪೂರ್ಣ ಶ್ರದ್ಧಾಂಜಲಿ

ನಗರದ ಬಸವ ವೃತ್ತದಲ್ಲಿ ಆಯೋಜಿಸಿದ್ದ ಬಿ.ನಾರಾಯಣರಾವ್​ ಅವರಿಗೆ ಶ್ರದ್ಧಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮಲ್ಲಿ ಮಾತನಾಡಿದ ಶ್ರೀಗಳು, ಶಾಸಕರ ಅಗಲಿಕೆ ಕ್ಷೇತ್ರ ಮತ್ತು ನಾಡಿಗೆ ತುಂಬಲಾರದ ನಷ್ಟ. ಅವರ ಅಗಲಿಕೆ ಬಸವ ಭಕ್ತರಿಗೆ ನೋವು ತಂದಿದೆ ಎಂದರು.

ನಂತರ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ನಾರಾಯಣರಾವ್​ ಅವರೊಂದಿಗಿನ 20 ವರ್ಷಗಳ ಸಂಬಂಧವನ್ನು ಸ್ಮರಿಸಿ ಭಾವುಕರಾದರು. ನಾರಾಯಣರಾವ್​ ಪಕ್ಷಾತೀತವಾಗಿ ರಾಜ್ಯಮಟ್ಟದಲ್ಲಿ ಎಲ್ಲಾ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ನಾವಿಬ್ಬರು ಪರಸ್ಪರ ಎದುರಾಳಿಯಾಗಿ ಚುನಾವಣೆ ಎದುರಿಸಿದ್ರೂ ನಮ್ಮಿಬ್ಬರಲ್ಲಿ ಮನಸ್ತಾಪ ಇರಲಿಲ್ಲ. ನನಗೆ ಸದಾ ಮಾರ್ಗದರ್ಶಕರಾಗಿದ್ದ ನಾರಾಯಣರಾವ್, ನನ್ನ ಹಿರಿಯಣ್ಣನಂತಿದ್ದರು ಎಂದರು.

ಭಾಲ್ಕಿಯ ಶ್ರೀ ಗುರುಬಸವ ಪಟ್ಟದೇವರು ಮಾತನಾಡಿ, ನಾರಾಯಣರಾವ್​ ಅವರಲ್ಲಿ ಬಸವ ತತ್ವದ ಬಗ್ಗೆಯಿದ್ದ ಕಾಳಜಿ ಮತ್ತು ಕಲ್ಯಾಣ ನಾಡನ್ನು ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಮಾಡಬೇಕೆನ್ನುವ ತುಡಿತ ಎಲ್ಲಾ ರಾಜಕೀಯ ನಾಯಕರಿಗೆ ಮಾದರಿಯಾಗಿದೆ ಎಂದು ಸ್ಮರಿಸಿದರು.

ಯುವ ಮುಖಂಡ ಶಿವಕುಮಾರ್ ಬಿರಾದಾರ ಮಾತನಾಡಿ, ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಕುಟುಂಬದಲ್ಲಿ ಜನಿಸಿದ ಬಿ.ನಾರಾಯಣರಾವ್​ ಅವರದ್ದು ಹೋರಾಟಮಯ ಬದುಕಾಗಿತ್ತು. ಬೂತ್​ ಮಟ್ಟದಿಂದ 40 ವರ್ಷಗಳ ಸತತ ಸಂಘರ್ಷದ ಮೂಲಕ 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ನೆಲದಲ್ಲಿ ಶಾಸಕರಾಗಿದ್ದು, ಬೀದರ್​ ಜಿಲ್ಲೆಯಲ್ಲಿ ಐತಿಹಾಸಿಕ ಎಂದರು.

ABOUT THE AUTHOR

...view details