ಬೀದರ್: ಬಯಲು ಸೀಮೆ ತುತ್ತ ತುದಿಯ ಬೀದರ್ ಜಿಲ್ಲೆಯಾದ್ಯಂತ ಈ ಬಾರಿ ಮುಂಗಾರು ಹಂಗಾಮಿನ ವಾಣಿಜ್ಯ ಬೆಳೆ ಸೋಯಾಬೀನ್ ಅನ್ನದಾತರ ಪಾಲಿಗೆ ಶಾಪವಾಗಿದೆ. ಆಗ ಅತಿಯಾದ ಮಳೆಯಿಂದ ಈಗ ಮಳೆ ಇಲ್ಲದೆ ಬಿಸಿಲಿನ ತಾಪಕ್ಕೆ ಸುಟ್ಟು ಕರಕಲವಾಗ್ತಿದೆ.
ಅತಿವೃಷ್ಟಿ, ಅನಾವೃಷ್ಟಿ ಹೊಡೆತಕ್ಕೆ ಸೋಯಾಬೀನ್ ನಾಶ: ರೈತರ ಪಾಲಿಗೆ ಶಾಪವಾಯ್ತು ಬೆಳೆ - Bidar news
ಜಿಲ್ಲೆಯ ಔರಾದ್, ಕಮಲನಗರ, ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ ಹಾಗೂ ಹುಲಸೂರ ತಾಲೂಕಿನಲ್ಲಿ ಅತಿ ಹೆಚ್ಚು ಜನ ರೈತರು ಸೋಯಾಬೀನ್ ಬಿತ್ತನೆ ಮಾಡಿ ಕೈಸುಟ್ಟುಕೊಂಡಿದ್ದಾರೆ.
ಜಿಲ್ಲೆಯ ಔರಾದ್, ಕಮಲನಗರ, ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ ಹಾಗೂ ಹುಲಸೂರ ತಾಲೂಕಿನಲ್ಲಿ ಅತಿ ಹೆಚ್ಚು ಜನ ರೈತರು ಸೋಯಾಬೀನ್ ಬಿತ್ತನೆ ಮಾಡಿ ಕೈಸುಟ್ಟುಕೊಂಡಿದ್ದಾರೆ. ಬಂಗಾರಂತ ಬೆಳೆ ಬೆಳೆದ ರೈತರಿಗೆ ಮುಂಗಾರು ಹಂಗಾಮಿನ ಆರಂಭದಲ್ಲಿ ಅತಿಯಾದ ಮಳೆಯಿಂದ ಸೋಯಾಬೀನ್ ಮೊಳಕೆಗಳು ನೀರು ಪಾಲಾಗಿದ್ದವು ಅಲ್ಲಲ್ಲಿ ಉಳಿದ ಸೋಯಾಬೀನ್ ಬೆಳೆ ಇತ್ತಿಚೇಗೆ ಮಳೆ ಇಲ್ಲದಕ್ಕೆ ಒಣಗಿ ಕರಕಲಾಗಿವೆ. ಈ ಬಾರಿ ಸೋಯಾಬಿನ್ ರೈತರ ಕೈ ಹಿಡಿದು ಅನ್ನದಾತರ ಆರ್ಥಿಕ ಸಂಕಷ್ಟದ ಸುಧಾರಣೆ ಮಾಡುವ ಅನ್ನದಾತನ ಕನಸು ಭಗ್ನವಾಗಿದೆ.
ನೀರಾವರಿ ಇರುವವರು ಕೆಲವರು ನಿಯಮಿತವಾಗಿ ನೀರು ಉಣಿಸಿದ್ದರಿಂದ ಅಲ್ಲಲ್ಲಿ ಬೆಳೆ ಚೆನ್ನಾಗಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತೆ ಆಗಿದೆ. ಇನ್ನುಳಿದಂತೆ ಒಣ ಬೇಸಾಯ ಪದ್ಧತಿ ಅವಲಂಬಿಸಿರುವ ಬಹುತೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ಸಹಾಯ ಹಸ್ತಕ್ಕಾಗಿ ಆಗ್ರಹಿಸಿದ್ದಾರೆ.