ಕರ್ನಾಟಕ

karnataka

ಮೊಳಕೆಯೊಡೆಯುತ್ತಿರುವ ಬೆಳೆ ತಿಂದಾಕುತ್ತಿರುವ ಜಿಂಕೆಗಳು.. ಬೀದರ್​ ರೈತರಿಗೆ ಸಂಕಷ್ಟ

By

Published : Jul 22, 2021, 5:42 PM IST

ಜಿಂಕೆಗಳ ಕಾಟದಿಂದ ಬೀದರ್​ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಅರಣ್ಯ ವಲಯದಲ್ಲಿರಬೇಕಾದ ಜಿಂಕೆಗಳ ಹಿಂಡು ರೈತರ ಗದ್ದೆಗಳಿಗೆ ನುಗ್ಗಿ ಮುಂಗಾರು ಹಂಗಾಮಿನ ಬೆಳೆಗಳನ್ನು ನಾಶ ಮಾಡುತ್ತಿರುವುದು ಅನ್ನದಾತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

bidar
ಜಿಂಕೆ ಕಾಟಕ್ಕೆ ಅನ್ನದಾತರ ಪರದಾಟ

ಬೀದರ್: ಒಂದು ಕಡೆ ಕೊರೊನಾ, ಮತ್ತೊಂದೆಡೆ ಪ್ರವಾಹ ಇವೆಲ್ಲದರ ನಡುವೆ ಅಲ್ಪ ಸ್ವಲ್ಪ ಸುರಿದ ಮಳೆಯಿಂದ ಭಿತ್ತಿ ಬೆಳೆದ ಫಸಲು ನಾಶ ಮಾಡುತ್ತಿರುವ ಜಿಂಕೆ ಹಾವಳಿಯಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.

ಜಿಲ್ಲೆಯ ಭಾಲ್ಕಿ, ಕಮಲನಗರ, ಭಾಲ್ಕಿ, ಹುಮನಾಬಾದ್, ಹುಲಸೂರ ತಾಲೂಕಿನಲ್ಲಿ ಹಿಂಡು ಹಿಂಡಾಗಿ ಬರುವ ಜಿಂಕೆಗಳು ರೈತರ ಮುಂಗಾರು ಬೆಳೆಗಳಾದ ಸೋಯಾಬಿನ್, ತೊಗರಿ, ಉದ್ದು, ಹೆಸರು ಮೊಳಕೆಗಳು ತಿಂದು ಸಾಕಷ್ಟು ಹಾನಿ ಮಾಡಿವೆ. 100 ಕ್ಕೂ ಅಧೀಕ ಜಿಂಕೆಗಳು ಔರಾದ್ ತಾಲೂಕಿನ ಚಟ್ನಾಳ, ಜಿರ್ಗಾ, ಬೆಳಕೊಣಿ, ಹೆಡಗಾಪೂರ, ಮುಸ್ತಾಪೂರ್, ಲಾಧ, ಬಾಚೆಪಳ್ಳಿ, ಮಣಿಗೆಂಪೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ರೈತರ ಗದ್ದೆಗಳಿಗೆ ಲಗ್ಗೆ ಇಟ್ಟು ಭಾರಿ ಪ್ರಮಾಣದಲ್ಲಿ ಹಾನಿ ಮಾಡಿವೆ.

ಜಿಂಕೆ ಕಾಟಕ್ಕೆ ಬೇಸತ್ತ ಅನ್ನದಾತರು

ಅಲ್ಲದೇ ಕಮಲ ನಗರ ತಾಲೂಕಿನ ಸಂಗನಾಳ, ಕರಕ್ಯಾಳ, ಬಿಜಲಗಾಂವ್, ಮಾಳೆಗಾಂವ್, ಚಿಮ್ಮೆಗಾಂವ್, ಮುರ್ಕಿ, ಡೊಣಗಾಂವ್, ಕೊಟಗ್ಯಾಳ, ತೋರಣಾ ಗ್ರಾಮದಲ್ಲಿಯೂ ಜಿಂಕೆಗಳ ಕಾಟ ವ್ಯಾಪಕವಾಗಿದೆ. ಸಾಲ ಮಾಡಿ ಬಿತ್ತನೆ ಮಾಡಿದ್ದು, ಚಿಗುರೊಡೆಯುವ ಮೊಳಕೆಗಳನ್ನು ತಿಂದು ನಾಶ ಮಾಡಿರುವುದಕ್ಕೆ ಅನ್ನದಾತರು ಕಣ್ಣೀರು ಹಾಕುವಂತಾಗಿದೆ.

ಜಿಂಕೆ ದಾಳಿಯಿಂದ ಬೆಳೆ ಕಳೆದುಕೊಂಡ ರೈತರು ನಿಯಮಾನುಸಾರ ಅರ್ಜಿ ಸಲ್ಲಿಸಿ ಸರ್ಕಾರದ ಪರಿಹಾರ ಧನ ಪಡೆದುಕೊಳ್ಳಲು ಅವಕಾಶವಿದೆ ಎಂದು ಅರಣ್ಯ ಇಲಾಖೆ ಜಿಲ್ಲಾಧಿಕಾರಿ ಶಿವಶಂಕರ್​ ಹೇಳಿದ್ದಾರೆ.

ABOUT THE AUTHOR

...view details