ಕರ್ನಾಟಕ

karnataka

ETV Bharat / state

ಕೊರೊನಾ ಕಂಟಕದ ನಡುವೆ ಹೀಗೊಂದು ಮಾರಕ ರೋಗ: ಬೀದರ್​​​ನಲ್ಲಿ 11 ಕತ್ತೆಗಳು ಬಲಿ! - Surra Disease to donkeys

ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ 11 ಕತ್ತೆಗಳು ಸುರ್ರಾ ಎಂಬ ರೋಗದಿಂದ ಬಳಲಿ ಸಾವನ್ನಪ್ಪಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಥಮ ಬಾರಿಗೆ ಕಾಣಿಸಿಕೊಂಡ ಸುರ್ರಾ ಕಾಯಿಲೆಯಿಂದಾಗಿ ಕತ್ತೆ ಸಾಕಾಣಿಕೆ ಮಾಡುವ ಮಾಲೀಕರು ಕಂಗಾಲಾಗಿ ಹೋಗಿದ್ದಾರೆ.

deadly-disease-killed-11-donkeys-in-bidar
ಕೊರೊನಾ ಕಂಟಕದ ನಡುವೆ ಕತ್ತೆಗಳಿಗೂ ಅಂಟಿಕೊಂಡ ಮಾರಕ ರೋಗ: 11 ಕತ್ತೆಗಳ ದಾರುಣ ಸಾವು...!

By

Published : Nov 4, 2020, 9:22 PM IST

ಬೀದರ್: ಕೊರೊನಾ ಸೋಂಕಿನಿಂದ ಮನುಕುಲವೇ ತತ್ತರಿಸಿ ಹೋಗಿದ್ದು, ಈ ನಡುವೆ ಜಾನುವಾರುಗಳಿಗೆ ಲಿಂಪಿಸ್ಕಿನ್ ಸಾಂಕ್ರಾಮಿಕ ರೋಗಬಾಧೆ ಹರಡಿದೆ. ಇದೀಗ ಕತ್ತೆಗಳಿಗೆ ಸುರ್ರಾ ಸಾಂಕ್ರಮಿಕ ರೋಗ ಆವರಿಸಿಕೊಂಡಿದ್ದು, ಬೀದರ್​ನಲ್ಲಿ 11 ಕತ್ತೆಗಳು ಬಲಿಯಾಗಿವೆ.

ಜಿಲ್ಲೆಯ ಔರಾದ್ ಪಟ್ಟಣದಲ್ಲಿ 11 ಕತ್ತೆಗಳು ಸುರ್ರಾ ರೋಗದಿಂದ ಬಳಲಿ ಸಾವನ್ನಪ್ಪಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಥಮ ಬಾರಿಗೆ ಕಾಣಿಸಿಕೊಂಡ ಸುರ್ರಾ ಕಾಯಿಲೆಯಿಂದಾಗಿ ಕತ್ತೆ ಸಾಕಾಣಿಕೆ ಮಾಡುವ ಮಾಲೀಕರು ಕಂಗಾಲಾಗಿ ಹೋಗಿದ್ದಾರೆ.

ಈಗಾಗಲೇ 48 ಕತ್ತೆಗಳ ರಕ್ತದ ಮಾದರಿ ಪರೀಕ್ಷೆ ಮಾಡಲಾಗಿದ್ದು, ಸಾವನ್ನಪ್ಪಿರುವ 11 ಕತ್ತೆಗಳ ರಕ್ತದ ಮಾದರಿ ಪರೀಕ್ಷೆಯಲ್ಲಿ ಸುರ್ರಾ ಪಾಸಿಟಿವ್ ಪತ್ತೆಯಾಗಿದೆ. ಉಳಿದ 37 ಕತ್ತೆಗಳ ರಕ್ತದ ಪರಿಕ್ಷಾ ವರದಿ ನೆಗೆಟಿವ್ ಬಂದಿದೆ. ಅಲ್ಲದೆ ರೋಗ ಲಕ್ಷಣ ಕಾಣಿಸಿಕೊಂಡ 150 ಕತ್ತೆಗಳ ಮೇಲೆ ಪಶು ಸಂಗೋಪನಾ ಇಲಾಖೆ ವೈದ್ಯರು ತೀವ್ರ ನಿಗಾ ವಹಿಸಿದ್ದಾರೆ ಎನ್ನಲಾಗಿದೆ.

ಸುರ್ರಾ ರೋಗದ ಸೋಂಕು ಬೆಕ್ಕು, ಕುರಿ, ಮೇಕೆಗಳಿಗೂ ಅಂಟಿಕೊಳ್ಳುವ ಸಾಧ್ಯತೆ ಇದ್ದು, ಶಂಕಿತ ಸೋಂಕಿತ ಕತ್ತೆಗಳನ್ನು ಪ್ರತ್ಯೇಕಿಸಲಾಗಿದೆ. ಸದ್ಯ ಅವುಗಳನ್ನು ಬೇರೆಡೆ ಕ್ವಾರಂಟೈನ್​ ಮಾಡಲು ಪಶು ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್​ ಅವರ ತವರು ಕ್ಷೇತ್ರದಲ್ಲೇ ಸುರ್ರಾ ಸಾಂಕ್ರಾಮಿಕ ರೋಗದಿಂದ 11 ಕತ್ತೆಗಳು ಸಾವನ್ನಪ್ಪಿದ್ದು, ರೋಗಬಾಧೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕತ್ತೆ ಸಾಕಾಣಿಕೆ ಮಾಡುವ ಮಾಲೀಕರು ಆಗ್ರಹಿಸಿದ್ದಾರೆ.

ABOUT THE AUTHOR

...view details