ಕರ್ನಾಟಕ

karnataka

ETV Bharat / state

ಯುವಕನ ಬರ್ಬರ ಕೊಲೆ: ಗೋರ್ಟಾ ಅರಣ್ಯದಲ್ಲಿ ಶವ ಪತ್ತೆ - basavakalyan crime news

ಯುವಕ ಕಳೆದ 26ರಂದು ಮನೆಯಿಂದ ನಾಪತ್ತೆಯಾಗಿದ್ದ. ನಾಲ್ಕು ದಿನಗಳ ನಂತರ ತಾಲೂಕಿನ ಗೋರ್ಟಾ(ಬಿ) ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಈತನ ಶವ ಪತ್ತೆಯಾಗಿದೆ.

Dead body found in forest area at basavakalyan
ಗೋರ್ಟಾ ಆರಣ್ಯದಲ್ಲಿ ಶವ ಪತ್ತೆ

By

Published : Dec 31, 2020, 9:06 PM IST

ಬಸವಕಲ್ಯಾಣ: ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿ ಅರಣ್ಯ ಪ್ರದೇಶದಲ್ಲಿ ಬಿಸಾಡಿದ ಘಟನೆ ತಾಲೂಕಿನ ಗೋರ್ಟಾ(ಬಿ) ಗ್ರಾಮದಲ್ಲಿ ಜರುಗಿದೆ.

ಬಾಲ್ಕಿ ತಾಲೂಕಿನ ಮದಕಟ್ಟಿ ಗ್ರಾಮದ ರವಿ ನೀಲಪ್ಪ ಕೊಕಣೆ (30) ಕೊಲೆಯಾದ ಯುವಕ. ಕಳೆದ 26ರಂದು ಮನೆಯಿಂದ ಈತ ನಾಪತ್ತೆಯಾಗಿದ್ದ. ನಾಲ್ಕು ದಿನಗಳ ನಂತರ ತಾಲೂಕಿನ ಗೋರ್ಟಾ(ಬಿ) ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಈತನ ಶವ ಪತ್ತೆಯಾಗಿದೆ.

ಶವ ಪತ್ತೆಯಾದ ಸ್ಥಳ

ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಬೇರೆ ಸ್ಥಳದಲ್ಲಿ ಕೊಲೆ ಮಾಡಿದ ನಂತರ ಇಲ್ಲಿಗೆ ತಂದು ಬಿಸಾಡಿರಬಹುದು ಎಂದು ಶಂಕಿಸಲಾಗಿದೆ. ಆದರೆ ಕೊಲೆಗೆ ನಿಖರವಾದ ಕಾರಣ ಹಾಗೂ ಆರೋಪಿಗಳ ಬಗ್ಗೆ ಇನ್ನು ಯಾವುದೇ ಸುಳಿವು ಸಿಕ್ಕಿಲ್ಲ.

ಈ ಕುರಿತು ಮೃತನ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಇಲ್ಲಿಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details