ಕರ್ನಾಟಕ

karnataka

ETV Bharat / state

ಮಲಗಿದ್ದಲ್ಲೆ ಪ್ರಾಣ ಬಿಟ್ಟ ವಯೋವೃದ್ಧ: ಸಾವಿಗೆ ಕಾರಣವಾಯಿತೇ ಹಸಿವು.?

ಹೆದ್ದಾರಿ ಪಕ್ಕದ ಪಾಳು ಬಿದ್ದ ಡಾಬಾ ಒಂದರಲ್ಲಿ ಮೃತದೇಹ ಪತ್ತೆಯಾಗಿದ್ದು, ಮಹಾರಾಷ್ಟ್ರದ ಕಡೆಯಿಂದ ಕಾಲ್ನಡಿಗೆ ಮೂಲಕ ಬಂದು ಡಾಬಾದಲ್ಲಿ ಮಲಗಿರುವಾಗ, ಹಸಿವು ತಾಳಲಾರದೆ ಸಾವನ್ನಪ್ಪಿರಬೇಕು ಎಂದು ಶಂಕಿಸಲಾಗಿದೆ.

ಮಲಗಿದಲ್ಲೆ ಪ್ರಾಣ ಬಿಟ್ಟ ವಯೋವೃದ್ಧ
ಮಲಗಿದಲ್ಲೆ ಪ್ರಾಣ ಬಿಟ್ಟ ವಯೋವೃದ್ಧ

By

Published : May 24, 2020, 12:00 AM IST

ಬಸವಕಲ್ಯಾಣ: ಹೆದ್ದಾರಿ ಪಕ್ಕದ ಪಾಳು ಬಿದ್ದ ಡಾಬಾ ಒಂದರಲ್ಲಿ ವ್ಯಕ್ತಿಯೋರ್ವ ಮಲಗಿದ್ದಲ್ಲೆ ಪ್ರಾಣ ಬಿಟ್ಟಿದ್ದು, ಹಸಿವಿನಿಂದ ಸಾವನ್ನಪ್ಪಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.

ಮಹಾರಾಷ್ಟ್ರದ ಗಡಿಗೆ ಸಮೀಪವಿರುವ ತಾಲೂಕಿನ ಚಂಡಕಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ-65 ರ ಪಕ್ಕದಲ್ಲಿ ಬಂದ್ ಆಗಿದ್ದ ಹಳೆ ಡಾಬಾದಲ್ಲಿ ಮಲಗಿದ್ದ ಈತ, ಅಲ್ಲೆ ಪ್ರಾಣ ಬಿಟ್ಟಿದ್ದಾನೆ. ಸುಮಾರು 55 ರಿಂದ 65 ರ ವಯಸ್ಸಿರಬಹುದೆಂದು ಅಂದಾಜಿಸಲಾಗಿದೆ. ಮಹಾರಾಷ್ಟ್ರದ ಕಡೆಯಿಂದ ಕಾಲ್ನಡಿಗೆ ಮೂಲಕ ಬಂದು ಡಾಬಾದಲ್ಲಿ ಮಲಗಿರಬೇಕು ಎಂದು ಶಂಕಿಸಲಾಗಿದ್ದು, ಈತನ ಗುರುತು, ವಿಳಾಸ ಪತ್ತೆಯಾಗಿಲ್ಲ.

ಸುದ್ದಿ ತಿಳಿದ ಮಂಠಾಳ ಠಾಣೆ ಪಿಎಸ್‌ಐ ಜಿ. ಬಸಲಿಂಗಪ್ಪ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದು, ಮೃತ ವೃದ್ಧನ ವಿಳಾಸ ಪತ್ತೆಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಮೃತದೇಹವನ್ನು ಬ್ರಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ABOUT THE AUTHOR

...view details