ಬೀದರ್: ನಿನ್ನೆ 1000, ಇಂದು 1500 ಬಸ್ಗಳು ಓಡಾಟ ಪ್ರಾರಂಭಿಸಿವೆ. ನಾಳೆ 2000 ಬಸ್ಗಳು ಸಂಚರಿಸಲಿವೆ. ಹೀಗೆ ಮುಂದಿನ ಮುರ್ನಾಲ್ಕು ದಿನದಲ್ಲಿ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಬರುತ್ತದೆ ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಾರಿಗೆ ನೌಕರರ ಮುಷ್ಕರ: ಮೂರ್ನಾಲ್ಕು ದಿನದಲ್ಲಿ ಎಲ್ಲಾ ಸರಿಹೋಗುತ್ತೆ ಎಂದ ಡಿಸಿಎಂ ಲಕ್ಷ್ಮಣ ಸವದಿ - DCM laxman savadi
ಸಾರಿಗೆ ಸಂಸ್ಥೆಯ ನೌಕರರನ್ನು ದಾರಿ ತಪ್ಪಿಸುತ್ತಿದ್ದಾರೆ. ಇಂದು 1500 ಬಸ್ಗಳು ಓಡಾಟ ಪ್ರಾರಂಭಿಸಿದ್ದು, ನಾಳೆ 2000 ಬಸ್ಗಳು ಸಂಚರಿಸಲಿವೆ. ಹೀಗೆ ಮುಂದಿನ ಮುರ್ನಾಲ್ಕು ದಿನದಲ್ಲಿ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಬರುತ್ತದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
![ಸಾರಿಗೆ ನೌಕರರ ಮುಷ್ಕರ: ಮೂರ್ನಾಲ್ಕು ದಿನದಲ್ಲಿ ಎಲ್ಲಾ ಸರಿಹೋಗುತ್ತೆ ಎಂದ ಡಿಸಿಎಂ ಲಕ್ಷ್ಮಣ ಸವದಿ ಹುಮನಾಬಾದ್ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ](https://etvbharatimages.akamaized.net/etvbharat/prod-images/768-512-11361186-thumbnail-3x2-lek.jpg)
ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರಿಗೆ ಸಂಸ್ಥೆಯ ನೌಕರರನ್ನು ದಾರಿ ತಪ್ಪಿಸುತ್ತಿದ್ದಾರೆ. ಎಸ್ಮಾ ಕಾಯ್ದೆ ಜಾರಿಗೊಳಿಸುವ ಅಗತ್ಯವಿಲ್ಲ, ನೌಕರರು ಮುಷ್ಕರ ಕೈ ಬಿಡುತ್ತಾರೆ. ನೋಡ್ತಾ ಇರಿ ಎಂದು ಸವದಿ ಹೇಳಿದರು.
ಮಹಾರಾಷ್ಟ್ರದಲ್ಲಿ ಕಾರ್ಮಿಕ ಸಂಘಟನೆಗಳ ಹೆಸರಿನಲ್ಲಿ ದತ್ತಾ ಸಾವಂತ ಎಂಬಾತ ಒಂದು ವರ್ಷ ಕಾಲ ಹೋರಾಟ ಮಾಡಿದ್ರು. ಪರಿಣಾಮ ಎಲ್ಲಾ ಕಂಪನಿಗಳು ಬಾಗಿಲು ಮುಚ್ಚಿಕೊಂಡು ಬೇರೆ ಕಡೆ ಹೋದವು. ನಂತರ ಅವರು ಕಾರ್ಮಿಕ ಹೋರಾಟವನ್ನೇ ಬಳಸಿಕೊಂಡು ರಾಜಕೀಯ ಪ್ರವೇಶ ಮಾಡಿ, ವಿಧಾನಸಭೆಗೆ ಪ್ರವೇಶಿಸಿದ್ರು. ಹೀಗೆ ಕಾರ್ಮಿಕರನ್ನು ಬೀದಿಪಾಲು ಮಾಡಿ ಡಿ.ಕೆ ಶಿವಕುಮಾರ್ ಅದೇ ದಾರಿಯಲ್ಲಿ ಸಾಗಬೇಕು ಅಂದಕೊಂಡಿದ್ದಾರೆ ಎಂದು ಡಿಕೆಶಿ ವಿರುದ್ಧ ಸವದಿ ಹರಿಹಾಯ್ದರು.