ಬೀದರ್: 'ಈಟಿವಿ ಭಾರತ'ದಲ್ಲಿ 'ಉದ್ಧಾರ ಮಾಡದ ಉದ್ದು, ಮೂಳೆ ಮುರಿದ ತೊಗರಿ, ಅನ್ನದಾತರಿಗೆ ಸೊಲುಣಿಸಿದ ಸೋಯಾಬಿನ್' ಎಂಬ ತಲೆ ಬರಹದಡಿಯಲ್ಲಿ ರೈತರ ಸಂಕಷ್ಟದ ಬಗ್ಗೆ ವಿಸ್ತೃತ ವರದಿ ಪ್ರಸಾರ ಮಾಡಲಾಗಿತ್ತು. ಈ ವರದಿಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದ್ದಾರೆ.
ವಾರದೊಳಗೆ ಬೆಳೆಹಾನಿ ಪರಿಹಾರ ನೀಡಲು ಡಿಸಿ ಸೂಚನೆ: ಈಟಿವಿ ಭಾರತ ವರದಿ ಫಲಶ್ರುತಿ - ಈಟಿವಿ ಭಾರತ ಇಂಫ್ಯಾಕ್ಟ್
ಭೀಕರ ನೆರೆ ಪರಿಣಾಮ ಬೀದರ್ನಲ್ಲಿ ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದರು. ಈ ಬಗ್ಗೆ ಈಟಿವಿ ಭಾರತ ವರದಿಯನ್ನು ನೋಡಿದ ಜಿಲ್ಲಾಧಿಕಾರಿ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಾರದೊಳಗೆ ಬೆಳೆಹಾನಿ ಪರಿಹಾರ ನೀಡಲು ಡಿಸಿ ಸೂಚನೆ
ಸತತ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಸೋಯಾಬಿನ್ ಬೆಳೆ ನೀರು ಪಾಲಾಗಿದೆ. ಹೀಗಾಗಿ ಶೀಘ್ರ ಬೆಳೆ ಹಾನಿ ವರದಿ ಸಿದ್ದಪಡಿಸಿ ವಾರದೊಳಗಾಗಿ ಪರಿಹಾರ ನೀಡುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹದೇವ್ ಸೂಚನೆ ನೀಡಿದ್ದಾರೆ.