ಬೀದರ್:ದತ್ತ ಜಯಂತಿ ನಿಮಿತ್ತ 2111 ಜನರಿಗೆ ಸಾಮೂಹಿಕ ಇಷ್ಟಲಿಂಗ ದಿಕ್ಷಾ ಕಾರ್ಯಕ್ರಮಕ್ಕೆ ಹಣೆಗಾಂವ್ ಸಂಸ್ಥಾನದ ಪೂಜ್ಯ ಶಂಕರಲಿಂಗ ಶಿವಾಚಾರ್ಯರು ಚಾಲನೆ ನೀಡಿದರು.
ದತ್ತ ಜಯಂತಿ ನಿಮಿತ್ತ ಸಾಮೂಹಿಕ ಇಷ್ಟಲಿಂಗ ದಿಕ್ಷಾ ಕಾರ್ಯಕ್ರಮ
ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ದತ್ತ ಸಾಯಿ ಶನೇಶ್ವರ ಟ್ರಸ್ಟ್ ಆಯೋಜಿಸಿದ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಗ್ರಾಮಗಳ 2111 ಜನರಿಗೆ ಇಷ್ಟಲಿಂಗ ದಿಕ್ಷೆ ನೀಡಲಾಯಿತು.
ಜಿಲ್ಲೆಯ ಔರಾದ್ ಪಟ್ಟಣದ ದತ್ತ ಸಾಯಿ ಶನೇಶ್ವರ ಟ್ರಸ್ಟ್ ಆಯೋಜಿಸಿದ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಗ್ರಾಮಗಳ 2111 ಜನರಿಗೆ ಇಷ್ಟಲಿಂಗ ದಿಕ್ಷೆ ನೀಡಲಾಯಿತು. ಪೂಜ್ಯ ನಾಗಲಿಂಗ ಸ್ವಾಮಿಜಿಗಳು, ರಾಜಶೇಖರ್ ಸ್ವಾಮಿ ಗೋರ್ಟಾ ಸೇರಿದಂತೆ ಜಿಲ್ಲೆಯ ಹಲವು ವೀರಶೈವ ಮಠಾಧೀಶರ ಸಮ್ಮುಖದಲ್ಲಿ ಮಹಿಳೆಯುರು, ಮಕ್ಕಳು, ಯುವಕರು ಸಾಮೂಹಿಕವಾಗಿ ದಿಕ್ಷೆ ನೀಡಲಾಯಿತು.
ದುಶ್ಚಟಗಳಿಗೆ ದಾಸರಾಗಿ ಯುವ ಪೀಳಿಗೆ ಜೀವನದ ಮೌಲ್ಯಗಳು ಕಳೆದುಕೊಳ್ಳುತ್ತಿದೆ. ಧಾರ್ಮಿಕ ಸಂಸ್ಕಾರಗಳಲ್ಲಿ ಒಂದಾದ ಇಷ್ಟ ಲಿಂಗ ದಿಕ್ಷೆಯಿಂದ ದುಶ್ಚಟಗಳಿಂದ ದೂರವಾಗಿ ಸಜ್ಜನರಾಗುವಂಥ ಪರಿವರ್ತನೆ ಸಾಧ್ಯವಾಗಲಿದೆ ಎಂದು ಈ ವೇಳೆಯಲ್ಲಿ ಪೂಜ್ಯ ಶಂಕರಲಿಂಗ ಶಿವಾಚಾರ್ಯರು ಆಶಿರ್ವಚನ ನೀಡಿದರು.