ಬೀದರ್: ನಗರದ ಜನವಾಡ ರಸ್ತೆಯಲ್ಲಿರುವ ಬಸ್ ನಿಲ್ದಾಣದ ಎದುರಲ್ಲೇ ಯುವಕನೊಬ್ಬನ ಬರ್ಬರ ಹತ್ಯೆಯಾಗಿದೆ.
ಬಸ್ ನಿಲ್ದಾಣ ಎದುರಲ್ಲೇ ಯುವಕನ ಬರ್ಬರ ಹತ್ಯೆ! - bidar crime news
ಬೀದರ್ನಲ್ಲಿ ಬೆಚ್ಚಿ ಬೀಳಿಸುವ ಘಟನೆ ಜರುಗಿದೆ. ವ್ಯಕ್ತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
![ಬಸ್ ನಿಲ್ದಾಣ ಎದುರಲ್ಲೇ ಯುವಕನ ಬರ್ಬರ ಹತ್ಯೆ! Cruel murder in bidar](https://etvbharatimages.akamaized.net/etvbharat/prod-images/768-512-9730008-thumbnail-3x2-nin.jpg)
ಬಸ್ ನಿಲ್ದಾಣ ಎದುರಲ್ಲೆ ಯುವಕನ ಬರ್ಬರ ಹತ್ಯೆ
ಬಸ್ ನಿಲ್ದಾಣ ಎದುರಲ್ಲೇ ಯುವಕನ ಬರ್ಬರ ಹತ್ಯೆ
ಜಿಲ್ಲೆಯ ಔರಾದ್ ತಾಲೂಕಿನ ಚಿಂತಾಕಿ ಗ್ರಾಮದ ವಿಲ್ಸನ್ (28) ಎಂಬಾತನ ಮೃತ ದೇಹ ಪತ್ತೆಯಾಗಿದೆ. ಕಲ್ಲಿನಿಂದ ಕೊಚ್ಚಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು ಯಾವ ಕಾರಣಕ್ಕಾಗಿ ಕೃತ್ಯ ನಡೆದಿದೆ ಎಂಬುದು ಇನ್ನೂ ತಿಳಿದಿಲ್ಲ.
ಸ್ಥಳಕ್ಕೆ ನ್ಯೂಟೌನ್ ಪಿಎಸ್ ಐ ಸಂತೋಷ ತಟ್ಟೆಪಳ್ಳಿ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Dec 1, 2020, 8:46 PM IST