ಬೀದರ್:ಚಾಲಕನ ನಿಯಂತ್ರಣ ತಪ್ಪಿ ಲಾರಿವೊಂದು ರಸ್ತೆ ಮೇಲೆ ಹೋಗುತ್ತಿದ್ದ ಹಸುಗಳಿಗೆ ಡಿಕ್ಕಿ ಹೊಡೆದ ಪರಿಣಾಮ 8 ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ವಿಲಾಸಪೂರ್ ಗ್ರಾಮದ ಬಳಿ ನಡೆದಿದೆ.
ಹಸುಗಳ ಮೇಲೆ ಲಾರಿ ಹರಿಸಿದ ಚಾಲಕ - ವಿಲಾಸಪೂರ್ ಗ್ರಾಮ
ಲಾರಿ ಹರಿದು 8 ಹಸುಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ವಿಲಾಸಪೂರ್ ಗ್ರಾಮದ ಬಳಿ ನಡೆದಿದೆ.

Cows died by lorry accident at Bidar
ಲಾರಿ ಅಪಘಾತದಲ್ಲಿ ಸಾವನ್ನಪ್ಪಿರುವ ಹಸುಗಳು
ಅತಿ ವೇಗವಾಗಿ ಬಂದ ಲಾರಿ ಚಾಲಕ ಇಳಿಜಾರಿನಲ್ಲಿ ಬ್ರೇಕ್ ಹಾಕಲಾಗದೆ ರಸ್ತೆಯಲ್ಲಿ ಹೋಗುತ್ತಿದ್ದ ಹಸುಗಳ ಮೇಲೆ ಲಾರಿ ಹರಿಸಿದ್ದಾನೆ. ಪರಿಣಾಮ ಹಸುಗಳು ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿವೆ. ಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.