ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಸರ್ಕಾರದ ಎಲ್ಲ ಭ್ರಷ್ಟಾಚಾರ ದಾಖಲೆಯನ್ನು ರಾಹುಲ್ ಗಾಂಧಿಗೆ ಕಳುಹಿಸುವೆ: ಸಿಎಂ ಬೊಮ್ಮಾಯಿ - ETV Bharat kannada

ಪಿಎಸ್‍ಐ ಕೇಸ್‍ನಲ್ಲಿ ನಾವು ಯಾರನ್ನು ಬಿಟ್ಟಿಲ್ಲ, ಡಿಐಜಿ ಮುಟ್ಟುವುಕ್ಕೆ ಸಿದ್ದರಾಮಯ್ಯಗೆ ಧಮ್ ಇದ್ಯಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

CM Basavaraja Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

By

Published : Oct 18, 2022, 11:03 PM IST

ಬೀದರ್​:ಕಾಂಗ್ರೆಸ್ ಸರ್ಕಾರದಲ್ಲಿ ಆಗಿರುವ ಎಲ್ಲಾ ಭ್ರಷ್ಟಾಚಾರ, ಅವ್ಯವಹಾರ ಸಂಬಂಧಿಸಿದ ಎಲ್ಲಾ ಮಾಹಿತಿ ದಾಖಲೆಗಳನ್ನು ರಾಹುಲ್‍ಗೆ ಕಳಿಸಿ ಕೊಡುತ್ತೇನೆ, ಏನು ಮಾಡುತ್ತಾರೋ ನೋಡೋಣ ಎಂದು ಹಣ ಕೊಟ್ರೆ ಸರ್ಕಾರಿ ನೌಕರಿಗಳು ಸಿಗುತ್ತವೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸವಾಲೆಸೆದಿದ್ದಾರೆ.

ಬೀದರ್‌ ಜಿಲ್ಲೆಯ ಔರಾದ್‍ನಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, 2016 ರ ಶಿಕ್ಷಕರ ನೇಮಕಾತಿ ಹಗರಣ ಸೇರಿ ಎಲ್ಲಾ ವಿವರ ಕೊಡಲಿದ್ದೇವೆ. ಪಿಎಸ್‍ಐ ಕೇಸ್‍ನಲ್ಲಿ ನಾವು ಯಾರನ್ನೂ ಬಿಟ್ಟಿಲ್ಲ, ಡಿಐಜಿ ಮುಟ್ಟುವುಕ್ಕೆ ಸಿದ್ದರಾಮಯ್ಯಗೆ ಧಮ್ ಇದ್ಯಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಡಿಐಜಿ ಮನೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ದೊಡ್ಡ ಹಗರಣ ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ದೂರಿದರು. ಎಸ್‍ಸಿ, ಎಸ್‍ಟಿಗೆ ಮೀಸಲಾತಿ ಕಾಂಗ್ರೆಸ್ ಕೊಡುಗೆ ಎಂದು ರಾಹುಲ್ ಹೇಳಿದ್ದಾರೆ. ಆದರೆ ನಿಮಗೆ ಆತ್ಮಸಾಕ್ಷಿ ಇರಬೇಕಲ್ಲ, ಸರ್ಕಾರ ಯಾರದು, ಕ್ಯಾಬಿನೆಟ್ ಯಾರ್ದು, ನಿರ್ಣಯ ಯಾರ್ದು? ಮಾಡಿದ್ದು ನಾವು ಆದರೆ ಕಾಂಗ್ರೆಸ್ ನಮ್ದು ಒಂದು ಕೊಡುಗೆ ಇದೆ ಎನ್ನುತ್ತಿದ್ದಾರೆ. ನಿಮ್ಮ್ ಕೊಡುಗೆ ಏನು ಎಂದು ಸಿಎಂ ಪ್ರಶ್ನೆಸಿದರು.

ಇದನ್ನೂ ಓದಿ:Paycm ಆಯ್ತು ಈಗ ಕಾಂಗ್ರೆಸ್ ನಿಂದ Saycm ಅಭಿಯಾನ ಆರಂಭ

ABOUT THE AUTHOR

...view details