ಬೀದರ್:ಮಹಾಮಾರಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ- ದಿನೇ ಹೆಚ್ಚಾಗುತ್ತಿದ್ದು, ಗಡಿ ಜಿಲ್ಲೆ ಬೀದರ್ನಲ್ಲಿ ಇಂದು ಮತ್ತೊಬ್ಬ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.
ಬೀದರ್ನ ಮತ್ತೊಬ್ಬ ವ್ಯಕ್ತಿಗೆ ಕೊರೊನಾ: 15ಕ್ಕೇರಿದ ಸೋಂಕಿತರ ಸಂಖ್ಯೆ - Coronavirus
ಬೀದರ್ನ 27 ವರ್ಷದ ಯುವಕನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15ಕ್ಕೆ ತಲುಪಿದೆ.

ಬೀದರ್ನ ಮತ್ತೊಬ್ಬ ವ್ಯಕ್ತಿಯಲ್ಲಿ ಸೋಂಕು ದೃಢ
ಜಿಲ್ಲೆಯ 27 ವರ್ಷದ ಯುವಕನಲ್ಲಿ ಸೋಂಕು ಇರುವುದು ದೃಢವಾಗಿದೆ. ಬೀದರ್ನಿಂದ ದೆಹಲಿಯ ಜಮಾತ್ಗೆ ತೆರಳಿದ್ದ ಈ ವ್ಯಕ್ತಿ, ಸೋಂಕಿತ 117ರ ಸಂಪರ್ಕ ಹೊಂದಿದ್ದ. ಇದೀಗ ಈತ 428ನೇ ಸೋಂಕಿತನಾಗಿದ್ದಾನೆ. ಇದುವರೆಗೆ ಜಿಲ್ಲೆಯಲ್ಲಿ ಸೋಂಕು ಪೀಡಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಸದ್ಯಕ್ಕೆ ಒಲ್ಡ್ ಸಿಟಿಯನ್ನು ಹಾಟ್ಸ್ಪಾಟ್ ವಲಯ ಎಂದು ಗುರುತಿಸಲಾಗಿದ್ದು, ಸೋಂಕಿತರ ಸಂಪರ್ಕಕ್ಕೆ ಬಂದವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೂ ಪ್ರಯೋಗಾಲಯದಿಂದ ಸಾವಿರಕ್ಕೂ ಅಧಿಕ ಜನರ ವರದಿ ಬರಬೇಕಾಗಿದೆ.