ಕರ್ನಾಟಕ

karnataka

ETV Bharat / state

ದೆಹಲಿಗೆ ಹೋಗಿ ವಾಪಸಾಗಿದ್ದ ವ್ಯಕ್ತಿಗೆ ಕೊರೊನಾ ಶಂಕೆ.. ವಿಶೇಷ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ.. - bidar news Coronavirus infection infected

ಮಾಹಾಮಾರಿ ಕೊರೊನಾ ವೈರಸ್ ಸೋಂಕು ಬೀದರ್ ಜಿಲ್ಲೆಗೆ ಇನ್ನೂ ಅಂಟಿಲ್ಲ. ಈವರೆಗೂ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಇನ್ನೂ 5 ಜನರ ಪರೀಕ್ಷೆ ವರದಿಗಾಗಿ ಕಾಯಲಾಗ್ತಿದೆ.

bidar
ಜಿಲ್ಲಾಧಿಕಾರಿಗಳ ಕಚೇರಿ

By

Published : Mar 28, 2020, 9:19 PM IST

ಬೀದರ್: ಗಡಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ತಗುಲಿದ ಶಂಕೆ ಹಿನ್ನೆಲೆಯಲ್ಲಿ ದೆಹಲಿಯ ಶಾಹೀನ್‌ಭಾಗ್​ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಲು ಹೋಗಿದ್ದ ನಗರದ ಓಲ್ಡ್ ಸಿಟಿ ನಿವಾಸಿಯನ್ನ ತಪಾಸಣೆಗೊಳಪಡಿಸಲಾಗಿದೆ. ಜತೆಗೆ ಅವರಿಗೆ ವಿಶೇಷ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ ಎಚ್ ಆರ್ ಮಹದೇವ ಹೇಳಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ದಿನಗಳ ಹಿಂದೆಯಷ್ಟೇ ದೆಹಲಿಯಿಂದ ಬೀದರ್​ಗೆ ವಾಪಸಾದ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದಿವೆ. ಬ್ರೀಮ್ಸ್ ಆಸ್ಪತ್ರೆಯ ವಿಶೇಷ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ.

ಅವರ ರಕ್ತ ಹಾಗೂ ಕಫದ ಮಾದರಿ ಪರೀಕ್ಷೆಯ ವರದಿ ಬರಬೇಕಿದೆ. ಸದ್ಯ ಅವರ ಕುಟುಂಬದ ಸದಸ್ಯರಿಗೂ ಹೋಂ ಕ್ವಾರಂಟೈನ್‌ನಲ್ಲಿ ನಿಗಾ ವಹಿಸಲಾಗ್ತಿದೆ ಎಂದರು. ಒಟ್ಟು 16 ಶಂಕಿತರ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು. ಈ ಪೈಕಿ 9 ಜನರ ವರದಿ ಬಂದಿದೆ. ಎಲ್ಲವೂ ನೆಗೆಟಿವ್ ಆಗಿವೆ. ಸದ್ಯ ಬೆಂಗಳೂರು ಪ್ರಯೋಗಾಲಯಕ್ಕೆ ರವಾನಿಸಿದ 5 ಜನರ ವರದಿಗಾಗಿ ಕಾಯ್ತಿದ್ದೇವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್‌ ಅವರ ಅಧ್ಯಕ್ಷತೆಯಲ್ಲಿ ಸಭೆ..

ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಇಲ್ಲ :ಮಾಹಾಮಾರಿ ಕೊರೊನಾ ವೈರಸ್ ಸೋಂಕು ಬೀದರ್ ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ. ಈವರೆಗೆ ಶಂಕಿತರನ್ನು ತಪಾಸಣೆಗೊಳಪಡಿಸಲಾಗಿದೆ. ಆದರೆ, ಈವರೆಗೂ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಇನ್ನೂ 5 ಜನರ ಪರೀಕ್ಷೆ ವರದಿಗಾಗಿ ಕಾಯ್ತಿದ್ದೇವೆ. ಹೊರ ಜಿಲ್ಲೆಗಳಿಂದ 16 ಸಾವಿರ ಜನ ಜಿಲ್ಲೆಗೆ ಆಗಮಿಸಿದ್ದಾರೆ. ಎಲ್ಲರನ್ನು ಹೋಂ ಕ್ವಾರಂಟೈನ್‌ನಲ್ಲಿರಿಸಿ ನಿಗಾವಹಸಿಲಾಗ್ತಿದೆ ಎಂದು ಸಭೆಯಲ್ಲಿ ಬ್ರೀಮ್ಸ್ ನಿರ್ದೇಶಕ ಡಾ.ಶಿವಕುಮಾರ್ ಸಿ ಆರ್ ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಮತ್ತಷ್ಟು ಕಠಿಣ ಕ್ರಮಗಳುಕೈಗೊಳ್ಳಬೇಕು. ಈವರೆಗೆ ಜಿಲ್ಲೆಯಲ್ಲಿ ನಿಯಂತ್ರಣ ಮಾಡಲು ಜಿಲ್ಲಾಡಳಿತ ಯಶಸ್ವಿಯಾಗಿದೆ. ಮುಂದೆ ಕೂಡ ಹೊರಗಿನಿಂದ ಬರುವ ಹೊಸಬರ ಮೇಲೆ ತೀವ್ರ ನಿಗಾ ಇಡಬೇಕು. ಗಡಿ ಚೆಕ್ ಪೋಸ್ಟ್‌ಗಳಲ್ಲದೆ ಎಲ್ಲೆಡೆ ಅಲರ್ಟ್ ಆಗಬೇಕು ಎಂದು ಸಚಿವ ಪ್ರಭು ಚೌಹಾಣ್‌ ಸಲಹೆ ನೀಡಿದರು.

ABOUT THE AUTHOR

...view details