ಕರ್ನಾಟಕ

karnataka

ETV Bharat / state

ದರ್ಗಾದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಮುಂದೂಡಿಕೆ - corona latest news

ನಗರದ ರಾಜಬಾಗ್​ ದರ್ಗಾದಲ್ಲಿ ಏಪ್ರಿಲ್ 19ರಂದು ನಡೆಯಬೇಕಿದ್ದ ಸಾಮೂಹಿಕ ವಿವಾಹವನ್ನು ಕೊರೊನಾ ವೈರಸ್ ಭೀತಿಯಿಂದಾಗಿ ಮುಂದೂಡಲಾಗಿದೆ.

Coronavirus effect
ಕೊರೊನಾ ಭೀತಿ: ದರ್ಗಾದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಮುಂದೂಡಿಕೆ

By

Published : Mar 27, 2020, 9:49 AM IST

ಬಸವಕಲ್ಯಾಣ: ನಗರದ ಶೇರ್-ಎ-ಸವಾರ್ ಬೈತುಲ್ ಮಾಲ್ ಟ್ರಸ್ಟ್​​ನಿಂದ ಏಪ್ರಿಲ್ 19ರಂದು ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಸಮಾರಂಭ ರದ್ದುಪಡಿಸಿ ದಿನಾಂಕ ಮುಂದೂಡಲಾಗಿದೆ ಎಂದು ಟ್ರಸ್ಟ್​ ಅಧ್ಯಕ್ಷ ಮುಖಂಡ ಜಿಯಾವುಲ್ ಹಸನ್ ಜಾಗೀರದಾರ ತಿಳಿಸಿದ್ದಾರೆ.

ಟ್ರಸ್ಟ್​ ವತಿಯಿಂದ ಪ್ರತೀ ವರ್ಷ ಹಮ್ಮಿಕೊಳ್ಳುವ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಬರುವ ಏ.19ರಂದು ನಗರದ ರಾಜಬಾಗ್ ಸವಾರ್ ದರ್ಗಾದಲ್ಲಿ ಆಯೋಜಿಸಲಾಗಿತ್ತು.

ಆದರೆ ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಅಂದು ನಡೆಯಬೇಕಿದ್ದ ವಿವಾಹ ಮಹೋತ್ಸವವನ್ನು ರದ್ದು ಪಡಿಸಲಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ವಿವಾಹ ಮಹೋತ್ಸವದ ದಿನಾಂಕ ನಿಗದಿ ಪಡಿಸಲಾಗುವುದು, ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.

ದರ್ಗಾದಲ್ಲಿ ಏ. 13ರಂದು ನಡೆಯಲಿದ್ದ ಹಜರತ್ ಅಫಜಲ್ ಪೀರ್ ಉರುಸ್ (ಜಾತ್ರೆ) ಮಹೋತ್ಸವವನ್ನು ಈ ಬಾರಿ ಸರಳವಾಗಿ ಆಚರಿಸಲಾಗುತಿದ್ದು, ಕೆಲವೇ ಕೆಲವು ಪ್ರಮುಖರು ಮಾತ್ರ ಉರುಸ್‌ನಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details