ಬೀದರ್: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸೋಮವಾರ ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಈಗ ಸೋಂಕಿತರ ಸಂಖ್ಯೆ 15 ಕ್ಕೇರಿದೆ. ಇನ್ನೂ 1204 ಜನರ ವರದಿ ಬಾಕಿ ಇದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಕೊರೊನಾ ಸೋಂಕಿತರ ಸಂಖ್ಯೆ 15 ಕ್ಕೇರಿಕೆ ಈ ಕುರಿತು ಹೊರಡಿಸಿರುವ ಪ್ರಕಟಣೆಯಲ್ಲಿ ದೆಹಲಿ ಜಮಾತ್ಗೆ ಹೋಗಿ ಬಂದವರ ಪ್ರಾಥಮಿಕ ಹಾಗೂ ಎರಡನೇ ಹಂತದ ಸಂಪರ್ಕದಲ್ಲಿದ್ದವರಲ್ಲೇ ಈ ಸೋಂಕು ದೃಢವಾಗಿದೆ.
ನಗರದ ಒಲ್ಡ್ ಸಿಟಿಯಲ್ಲಿ 8 ಹಾಗೂ ಬಸವಕಲ್ಯಾಣ, ಮನ್ನಾಖೆಳ್ಳಿ ತಲಾ ಒಂದೊಂದು ಹೀಗೆ ಶಾಂತವಾಗಿದ್ದ ನಗರದಲ್ಲಿ ಜಮಾತ್ಗೆ ಹೋಗಿ ಬಂದವರಲ್ಲಿ ಒಟ್ಟಾರೆ 10 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಅದಾದ ನಂತರ ಒಲ್ಡ್ ಸಿಟಿಯ 5 ಜನರಲ್ಲಿ ಈ ಸೋಂಕು ವ್ಯಾಪಿಸಿರುವುದು ಪ್ರಯೋಗಾಲಯದಿಂದ ಖಚಿತವಾಗಿದೆ.
ಒಟ್ಟಾರೆ ಪ್ರಯೋಗಾಲಯಕ್ಕೆ ರಕ್ತ ಹಾಗೂ ಗಂಟಲು ದ್ರವದ ಮಾದರಿ ಕಳಿಸಲಾಗಿದ್ದು, 757 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ ಕೂಡ 1204 ಜನರ ವರದಿ ಬರುವುದು ಬಾಕಿ ಇದೆ ಎಂದು ತಿಳಿಸಲಾಗಿದೆ.