ಬೀದರ್: ಕೊರೊನಾ ಸೋಂಕಿನ ಸಮರ ಮುಂದುವರೆದಿದೆ. ಇಂದು ಒಂದೇ ದಿನ 97 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, 106 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಇಂದು 97 ಜನರಿಗೆ ಕೊರೊನಾ ಸೋಂಕು ದೃಢ - Bidar
ಬೀದರ್ನಲ್ಲಿ ಇಂದು ಒಂದೇ ದಿನ 97 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, 106 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಬೀದರ್
ಜಿಲ್ಲೆಯ ಔರಾದ್-23, ಬಸವಕಲ್ಯಾಣ-05, ಭಾಲ್ಕಿ-17, ಬೀದರ್-30 ಹಾಗೂ ಹುಮನಾಬಾದ್-22 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇಲ್ಲಿಯವರೆಗೆ ಔರಾದ್-475, ಭಾಲ್ಕಿ-442, ಬಸವಕಲ್ಯಾಣ-532, ಬೀದರ್- 1156, ಹುಮನಾಬಾದ್-624 ಹಾಗೂ ಅನ್ಯ ರಾಜ್ಯಗಳ 19 ಜನರಲ್ಲಿ ಸೋಂಕು ದೃಢವಾಗಿದೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,248ಕ್ಕೆ ಏರಿಕೆಯಾಗಿದ್ದು, 2,288 ಜನರು ಬಿಡುಗಡೆಯಾಗಿದ್ದಾರೆ. 103 ಜನರು ಕೊರೊನಾಗೆ ಬಲಿಯಾಗಿದ್ದು ಇನ್ನೂ 901 ಗಂಟಲು ದ್ರವದ ಮಾದರಿ ಪರೀಕ್ಷಾ ವರದಿ ಬರೋದು ಬಾಕಿ ಇದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ತಿಳಿಸಿದ್ದಾರೆ.