ಬಸವಕಲ್ಯಾಣ: ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಾರಕ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಸೋಮವಾರ ಮತ್ತೆ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ತಾಲೂಕಿನಲ್ಲಿ ಸೋಂಕು ಪೀಡಿತರ ಸಂಖ್ಯೆ 456 ಕ್ಕೆ ತಲುಪಿದೆ.
ತಾಲೂಕಿನ ಹಾಮುನಗರ ತಾಂಡಾದ ನಿವಾಸಿ, ಇಲ್ಲಿಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾಗಿರುವ 64 ವರ್ಷದ ವ್ಯಕ್ತಿ, ಹಾಗೂ ಮುಚಳಂಬ ಗ್ರಾಮದ 35 ವರ್ಷದ ವ್ಯಕ್ತಿ ಹಾಗೂ ಹುಲಸೂರ ಪಟ್ಟಣದ 5 ವರ್ಷದ ವಕ್ತಿಗೆ ಮಹಾಮಾರಿ ಸೋಂಕು ವಕ್ಕರಿಸಿದೆ ಎಂದು ಆರೋಗ್ಯ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.