ಕರ್ನಾಟಕ

karnataka

ETV Bharat / state

ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆಯಲ್ಲಿ ಜನವೋ ಜನ : ಕೊರೊನಾ ನಿಯಮಗಳ ಉಲ್ಲಂಘನೆ - Bidar janashirvada

ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ. ಹೀಗೆ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡ್ತಿರುವ ಸಚಿವರ ಜನಾಶೀರ್ವಾದ ಕಾರ್ಯಕ್ರಮಕ್ಕೆ ಬೆಂಬಲವೇನೋ ಸಿಕ್ಕಿದೆ. ಆದ್ರೆ, ಕೊರೊನಾ ರೌದ್ರಾವತಾರದ ಭೀತಿ ಹೆಚ್ಚಿಸಿದೆ..

Corona rules break in Bidar
ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆಯಲ್ಲಿ ಜನವೋ ಜನ

By

Published : Sep 3, 2021, 7:04 PM IST

ಬೀದರ್: ಕೇಂದ್ರ ಸಚಿವ ಭಗವಂತ ಖೂಬಾ ಅವರು ಜನಾಶೀರ್ವಾದ ಹೆಸರಿನಲ್ಲಿ ನಡೆಸುತ್ತಿರುವ ಸಾಲು ಸಾಲು ಸಮಾವೇಶಗಳಲ್ಲಿ ಕೊರೊನಾ ನಿಯಂತ್ರಣದ ನಿಯಮಗಳು ಸಾಮೂಹಿಕವಾಗಿ ಉಲ್ಲಂಘನೆ ಆಗಿರುವುದು ಮತ್ತೆ ಮುಂದುವರೆದಿದೆ.

ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಇಂದು ನಡೆದ ಸಮಾವೇಶದ ಮೆರವಣಿಗೆ ವೇಳೆಯಲ್ಲಿ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರು. ಸಚಿವ ಭಗವಂತ ಖೂಬಾ ಸೇರಿದಂತೆ ಮುಖಂಡರು, ಕಾರ್ಯಕರ್ತರ ಮುಖದ ಮೇಲೆ ಮಾಸ್ಕ್ ಇರಲಿಲ್ಲ.

ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ. ಹೀಗೆ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡ್ತಿರುವ ಸಚಿವರ ಜನಾಶೀರ್ವಾದ ಕಾರ್ಯಕ್ರಮಕ್ಕೆ ಬೆಂಬಲವೇನೋ ಸಿಕ್ಕಿದೆ. ಆದ್ರೆ, ಕೊರೊನಾ ರೌದ್ರಾವತಾರದ ಭೀತಿ ಹೆಚ್ಚಿಸಿದೆ.

ಹುಮನಾಬಾದ್ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಸಚಿವರು ಮತ್ತು ಅವರ ತಂಡ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡಲು ಇಂತಹ ಶಕ್ತಿ ಪ್ರದರ್ಶನ ನಡೆಯುತ್ತಿದೆ. ಸಾಂಕ್ರಾಮಿಕ ರೋಗ ಕೊರೊನಾ ವೈರಾಣು ಹರಡುವ ಭೀತಿಯನ್ನು ಮಿರಿ ಕಾರ್ಯಕರ್ತರು ಜಮಾಯಿಸಿರಿವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ABOUT THE AUTHOR

...view details