ಕರ್ನಾಟಕ

karnataka

ETV Bharat / state

ಬೀದರ್​ನಲ್ಲಿ ಇಂದು 10 ಜನರಿಗೆ ಪಾಸಿಟಿವ್ : ಸೋಂಕಿತರ ಸಂಖ್ಯೆ 175ಕ್ಕೆ ಏರಿಕೆ - ಬೀದರ್​ ಕೊರೊನಾ ಅಪ್ಡೇಟ್​

ಬೀದರ್​ನಲ್ಲಿ ಇಂದು ಹತ್ತು ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 175 ಆಗಿದೆ. ಇದುವರೆಗೆ ಐವರು ಮೃತಪಟ್ಟಿದ್ದು, 41 ಜನ ಗುಣಮುಖರಾಗಿದ್ದಾರೆ.

Corona positive for ten people in Bidar today
ಬೀದರ್​ ಕೊರೊನಾ ಅಪ್ಡೇಟ್​

By

Published : Jun 2, 2020, 10:53 PM IST

ಬೀದರ್ :ಜಿಲ್ಲೆಯಲ್ಲಿ ಇಂದು 10 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 175 ಕ್ಕೆ ಏರಿಕೆಯಾಗಿದೆ.

ಬೀದರ್ ತಾಲೂಕಿನ ಜನವಾಡ ಗ್ರಾಮದಲ್ಲಿ 10 ವಯಸ್ಸಿನ ಬಾಲಕಿಗೆ ಸೋಂಕು ದೃಢಪಟ್ಟಿದೆ. ಸೋಂಕಿತ ಬಾಲಕಿ ಮಹಾರಾಷ್ಟ್ರದಿಂದ ಪೋಷಕರೊಂದಿಗೆ ವಾಪಸ್ಸಾದ ಹಿನ್ನಲೆ ಆಕೆಯ ಪೋಷಕರನ್ನು ಪರೀಕ್ಷೆ ನಡೆಸಲಾಗಿದ್ದು, ವರದಿ ಬರಲು ಬಾಕಿಯಿದೆ. ಇನ್ನುಳಿದಂತೆ ಬಸವ ಕಲ್ಯಾಣ ತಾಲೂಕಿನ ಉಜಳಂಬದಲ್ಲಿ 4, ಧಾಮುರಿ ಗ್ರಾಮದಲ್ಲಿ 2, ರಾಜೋಳಾ ಗ್ರಾಮದಲ್ಲಿ 2, ಹಾಗೂ ಹುಲಸೂರು ತಾಲೂಕಿನ ಮಿರಕಲ್ ಗ್ರಾಮದಲ್ಲಿ ಒಂದು ಪ್ರಕರಣ ಪತ್ತೆಯಾಗಿವೆ. ಎಲ್ಲಾ ಗ್ರಾಮಗಳನ್ನು ಕಂಟೇನ್​ಮೆಂಟ್​ ಝೋನ್​ ಆಗಿ ಗುರುತಿಸಿ, ತೀವ್ರ ನಿಗಾ ವಹಿಸಲಾಗಿದೆ.

ಆರೋಗ್ಯ ಇಲಾಖೆಯ ಹೆಲ್ತ್​ ಬುಲೆಟಿನ್

ಜಿಲ್ಲೆಯಲ್ಲಿ ಇದುವರೆಗೆ 25,258 ಜನರ ಸ್ಯಾಂಪಲ್ಸ್ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 21,702 ಜನರ ವರದಿ ನೆಗೆಟಿವ್ ಬಂದಿದೆ. 175 ಜನರದ್ದು ಪಾಸಿಟಿವ್ ಬಂದಿದೆ. ಇನ್ನೂ 3,381 ಜನರ ಪರಿಕ್ಷಾ ವರದಿ ಬರಲು ಬಾಕಿ ಇದೆ. ಐವರು ಮೃತಪಟ್ಟಿದ್ದು, 41 ಜನ ಗುಣಮುಖರಾಗಿದ್ದಾರೆ. ಸದ್ಯ 129 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details